ಬೀದರ್: ಭೂಮಿಯಿಂದ ಭಾರೀ ಸದ್ದು ಕೇಳಿ ಬಂದು ಭೂಕಂಪನದ ಅನುಭವವಾದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಣಸನಾಳ ಗ್ರಾಮದಲ್ಲಿ ನಡೆದಿದೆ.
ಸಂಜೆ ವೇಳೆಗೆ ಭೂಮಿಯಿಂದ ಬಾರಿ ಸದ್ದು ಕೇಳಿ ಬಂದ ಕಾರಣ ಇದು ಭೂಕಂಪನ ಇರಬೇಕು ಎಂದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ದೊಡ್ಡಪ್ರಮಾಣದಲ್ಲಿ ಸದ್ದು ಕೇಳಿ ಬಂದು ಭೂಮಿ ಕಂಪಿಸಿದ ಅನುಭವವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಜೊತೆ ಅಸಭ್ಯವಾಗಿ ವರ್ತನೆ- ಠಾಣೆ ಎದುರು ಬಿಗುವಿನ ವಾತಾವರಣ
ತಹಶೀಲ್ದಾರ್ ನಾಗಯ್ಯ ಹಿರೇಮಠ, ಪಿಎಸ್‍ಐ ರವಿಕುಮಾರ ನಾಯೋಡಿ, ಡಾ. ಗೋವಿಂದ್ ಸೇರಿದಂತೆ ಭೂಗರ್ಭ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ್ದಾರೆ. ಇದರ ಬಗ್ಗೆ ನುರಿತ ತಜ್ಞರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುವುದು ಎಂದು ತಹಶೀಲ್ದಾರರು ಗ್ರಾಮಸ್ಥರಿಗೆ ಹೇಳಿದ್ದಾರೆ.