ನೆನಪಿರಲಿ ಪ್ರೇಮ್ (Nenapirali Prem) ಪಾತ್ರಗಳ ಆಯ್ಕೆಯಲ್ಲಿ ವಿಭಿನ್ನವಾಗಿ ಕಾಣಿಸ್ತಾರೆ. ಬರೋ ಎಲ್ಲಾ ಪಾತ್ರಗಳನ್ನೂ ಅವರು ಒಪ್ಪಿಕೊಳ್ಳುವುದಿಲ್ಲ. ಅಳೆದು ತೂಗಿ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾಗಳನ್ನೇ ಮಾಡುತ್ತಾ ಬಂದಿದ್ದಾರೆ. ಈಗ ಪ್ರೇಮ್ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಅಣ್ಣನ ಮಗನ ನಿರಂಜನ್ ಸುಧೀಂದ್ರ (Niranjan Sudhindra) ನಾಯಕನಾಗಿ ನಟಿಸುತ್ತಿರುವ ‘ಸ್ಪಾರ್ಕ್ ಚಿತ್ರಕ್ಕೆ ಅವರು ಎಂಟ್ರಿ ಕೊಟ್ಟಿದ್ದಾರೆ. ಇಂದು (ಏ.18) ಪ್ರೇಮ್ ಬರ್ತ್ಡೇ ಹಿನ್ನೆಲೆ ಅವರ ಪಾತ್ರದ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.
‘ಸ್ಪಾರ್ಕ್’ (Spark) ಚಿತ್ರದಲ್ಲಿ ನಿರಂಜನ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಲವ್ಲಿ ಸ್ಟಾರ್ ಗೊಂದು ಸ್ಪೆಷಲ್ ಪಾತ್ರ ಡಿಸೈನ್ ಮಾಡಿದ್ದಾರೆ. ಹಿಂದೆಂದೂ ಕಾಣದ ಲುಕ್ ನಲ್ಲಿ ಪ್ರೇಮ್ ನಿಮಗೆ ಕಾಣಿಸ್ತಾರೆ. ಸ್ಪೆಷಲ್ ಪಾತ್ರವನ್ನು ಅವರಿಗಾಗಿ ಮಹಾಂತೇಶ್ ಎಣೆದಿದ್ದು, ಹೀಗಾಗಿ ಪ್ರೇಮ್ ಕೂಡ ಇಷ್ಟಪಟ್ಟು ಚಿತ್ರ ಮಾಡಲು ಮುಂದಾಗಿದ್ದಾರೆ. ತಮ್ಮ ಇಷ್ಟುವರ್ಷದ ಪಯಣದ ಅನುಭವಗಳನ್ನು ಇಟ್ಟುಕೊಂಡು ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಎಲ್ಲರ ಪಾತ್ರಗಳನ್ನು ವಿಶೇಷವಾಗಿ ರೂಪಿಸಿದ್ದಾರೆ. ಇದನ್ನೂ ಓದಿ:‘ಜಾಟ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಸನ್ನಿ ಡಿಯೋಲ್ ಸೇರಿ 7 ಮಂದಿ ವಿರುದ್ಧ FIR
ಜೇಮ್ಸ್, ಭರಾಟೆ, ಕನಕ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ದುಡಿದಿರುವ ಡಿ.ಮಹಾಂತೇಶ್ ಹಂದ್ರಾಳ್ ‘ಸ್ಪಾರ್ಕ್’ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಚಿತ್ರದಲ್ಲಿ ನಿರಂಜನ್ ಸುಧೀಂದ್ರ ಪತ್ರಕರ್ತನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ರಚನಾ ಇಂದರ್ (Rachana Inder) ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ರಾಕೇಶ್ ಅಡಿಗ ನಟನೆಯ ‘ನಾನು ಮತ್ತು ಗುಂಡ 2’ ಟೀಸರ್ ಔಟ್
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸ್ಪಾರ್ಕ್ ಚಿತ್ರ ಡಾ.ಗರಿಮಾ ಅವಿನಾಶ್ ವಸಿಷ್ಠ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಮಧು ಸಂಕಲನ ಈ ಚಿತ್ರಕ್ಕಿದೆ. ಸದ್ಯ ‘ಸ್ಪಾರ್ಕ್’ ಶೂಟಿಂಗ್ ಭರದಿಂದ ಸಾಗುತ್ತಿದೆ.