ಬೆಂಗಳೂರು: ಒಂದೇ ಒಂದು ಮೊಬೈಲ್ಗಾಗಿ ಪ್ರೇಮಿಗಳಿಬ್ಬರು ರಸ್ತೆಯಲ್ಲೆ ಕಿತ್ತಾಡಿಕೊಂಡ ಘಟನೆ ಬೆಂಗಳೂರಿನ ಆಲಿ ಆಸ್ಕರ್ ರಸ್ತೆಯಲ್ಲಿ ನಡೆದಿದೆ.
ಪ್ರೇಮಿಗಳು ಊಟಕ್ಕೆಂದು ಹೋಟೆಲ್ಗೆ ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಯುವಕ, ಯುವತಿಗೆ ಗೊತ್ತಾಗದಂತೆ ಮೊಬೈಲಿನಲ್ಲಿ ವ್ಯವಹಾರ ನಡೆಸುತ್ತಿದ್ದನು. ಯುವತಿಗೆ ಮೊದಲಿನಿಂದಲೂ ಯುವಕನ ಮೇಲೆ ಅನುಮಾನ ಇತ್ತು. ಹಾಗಾಗಿ ಪದೇ ಪದೇ ಯುವಕನ ಮೊಬೈಲ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಮೊಬೈಲ್ ಕಸಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ನಡು ರಸ್ತೆಯಲ್ಲೇ ಯುವಕನಿಂದ ಪ್ರಿಯತಮೆ ಮೇಲೆ ಹಲ್ಲೆ!
Advertisement
Advertisement
ಯುವತಿಗೆ ಅನುಮಾನ ಬಂದು ಯುವಕನ ಮೊಬೈಲ್ ಕಿತ್ತುಕೊಂಡು ಹೊರಗೆ ಬಂದಿದ್ದಾಳೆ. ಯುವತಿ ಮೊಬೈಲ್ ಕಿತ್ತುಕೊಂಡು ಬಂದ ತಕ್ಷಣ ಯುವಕ ಕೋಪಗೊಂಡನು. ಬಳಿಕ ಮೊಬೈಲ್ಗಾಗಿ ಪ್ರೇಮಿಗಳಿಬ್ಬರು ರಸ್ತೆಯಲ್ಲೇ ಎಳೆದಾಡಿಕೊಂಡಿದ್ದಾರೆ. ಇಬ್ಬರು ಕಿತ್ತಾಡಿದ ಬಳಿಕ ಯುವಕನ ಕೈಗೆ ಮೊಬೈಲ್ ಸಿಕ್ಕಿತ್ತು. ಮೊಬೈಲ್ ಸಿಕ್ಕ ಕೂಡಲೇ ಯುವಕ ಯುವತಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
Advertisement
ಯುವಕನ ಮೊಂಡುತನದಿಂದ ಬೇಸತ್ತ ಯುವತಿ ಕಣ್ಣೀರು ಹಾಕುತ್ತಿದ್ದಳು. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿದಿದ್ದು, ಯುವಕ- ಯುವತಿಯ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.