ಕಾರವಾರ: ದೇಹದ ಆರೋಗ್ಯ ಕಾಪಾಡಿಕೊಳ್ಳೋಕೆ ಮತ್ತು ಒಳ್ಳೆಯ ವಾತಾವರಣ ಬೇಕು ಅಂತ ಜನ ಉದ್ಯಾನವನಗಳಿಗೆ ಹೋಗುತ್ತಾರೆ. ಆದರೆ ಇಲ್ಲೊಂದು ಪಾರ್ಕಿಗೆ ಹೋಗಬೇಕು ಅಂದರೆ ಜನ ಕಣ್ಣು-ಕಿವಿ ಮುಚ್ಚಿಕೊಳ್ಳಲೇಬೇಕು.
ಕಾರವಾರ ನಗರದ ರವೀಂದ್ರನಾಥ್ ಟಾಗೋರ್ ಬೀಚ್ ಬಳಿ ಇರೋ ಮಕ್ಕಳ ಉದ್ಯಾನವನ ಹಾಗೂ ಗಾಂಧಿ ಉದ್ಯಾನವನದಲ್ಲಿ ಎಲ್ಲಿ ನೋಡಿದರೂ ಪ್ರೇಮಿಗಳೇ ಕಾಣುತ್ತಾರೆ. ಪ್ರೇಮಿಗಳ ಅಸಭ್ಯ ವರ್ತನೆಗೆ ಹಿರಿಯರು, ಮಕ್ಕಳು ಉದ್ಯಾನವನಕ್ಕೆ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಜನರು ಬೆಳಗ್ಗೆ ವಾಯುವಿಹಾರಕ್ಕೆ ಬರುವ ಮೊದಲೇ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಹೀಗಾಗಿ ಪಾರ್ಕ್ ನಲ್ಲಿ ಅಶ್ಲೀಲ ಚಟುವಟಿಕೆಗಳು ನಡೆಯುತ್ತವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
Advertisement
Advertisement
ಈ ಪಾರ್ಕ್ ನೋಡಿಕೊಳ್ಳಲು ಯಾವುದೇ ಸಿಬ್ಬಂದಿ ಇಲ್ಲ. ಈ ಉದ್ಯಾನವನದ ವಿದ್ಯುತ್ ದೀಪಗಳು ಕೆಟ್ಟು 2 ವರ್ಷ ಕಳೆದಿದೆ. ಹೀಗಾಗಿ ಅಶ್ಲೀಲ ಚಟುವಟಿಕೆ ಮಾಡೋರಿಗೆ ಮೆಚ್ಚಿನ ತಾಣವಾಗಿದೆ. ಇಲ್ಲಿನ ಅಶ್ಲೀಲ ದೃಶ್ಯಗಳನ್ನು ನೋಡಿ ಯಾರೂ ಕೂಡ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳು ಅಶ್ಲೀಲ ಚಟುವಟಿಕೆ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಇಲ್ಲಿನ ನಾಗರೀಕರು ಒತ್ತಾಯಿಸಿದ್ದಾರೆ.
Advertisement
Advertisement
ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿದ್ದ ಪಾರ್ಕ್ ನಗರಸಭೆ ನಿರ್ಲಕ್ಷ್ಯದಿಂದ ಅಶ್ಲೀಲ ಚಟುವಟಿಕೆಯ ತಾಣವಾಗಿ ಬದಲಾಗಿದೆ. ಇನ್ನಾದರೂ ನಗರಸಭೆ ಹಾಗೂ ಜಿಲ್ಲಾಡಳಿತ ಇತ್ತ ಗಮನಿಸಿ ಲವ್ವರ್ಸ್ ಪಾರ್ಕ್ ಆಗಿ ಬದಲಾಗಿರೋ ಗಾಂಧಿ ಉದ್ಯಾನವನ ಹಾಗೂ ಮಕ್ಕಳ ಉದ್ಯಾನವನವನ್ನ ಬದಲಿಸಬೇಕಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]