ಲಕ್ನೋ: ಪ್ರೇಮಿಗಳಿಬ್ಬರು ಪೊಲೀಸ್ ಠಾಣೆಯಲ್ಲೇ ಮದುವೆಯಾದ (Marriage) ಘಟನೆ ಉತ್ತರಪ್ರದೇಶದ (UttaraPradesh) ಬಂಡಾದಲ್ಲಿ ನಡೆದಿದೆ.
ದಭಾನಿಯ ಕಚಿಯಪುರ್ವಾ ಗ್ರಾಮದ ನಿವಾಸಿ ಅನಿಲ್ ಕುಮಾರ್ ಎಂಬಾತ ಬಿಘನಾ ಗ್ರಾಮದ ಹುಡುಗಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ (Love). ಅಷ್ಟೇ ಅಲ್ಲದೇ ಇವರಿಬ್ಬರೂ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಆದರೆ ಇದಕ್ಕೆ ಮನೆಯವರ ವಿರೋಧವಿತ್ತು. ಆದರೂ ಇವರಿಬ್ಬರೂ ಮದುವೆ ಆಗಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ಬಿಸಂಡಾ ಪೊಲೀಸ್ ಠಾಣೆಯ (Police Station) ಮೆಟ್ಟಿಲೇರಿದ್ದಾರೆ.
ಅಲ್ಲಿ ಪ್ರೇಮಿಗಳು ಇನ್ಸ್ಪೆಕ್ಟರ್ ಬಳಿ ದಯವಿಟ್ಟು ನಮಗೆ ಮದುವೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಪೊಲೀಸರು ಪ್ರೇಮಿಗಳನ್ನು ಮದುವೆ ಮಾಡಿದ್ದಾರೆ. ಪೊಲೀಸ್ ಠಾಣೆಯ ಆವರಣದ ದೇವಸ್ಥಾನದಲ್ಲಿ ಪಂಡಿತರು ಮಂತ್ರ ಪಠಿಸಿದ್ದು, ಈ ಇಬ್ಬರು ಪ್ರೇಮಿಗಳು ಸಪ್ತಪದಿಯನ್ನು ತುಳಿದಿದ್ದಾರೆ. ನಂತರ ಅಲ್ಲಿದ್ದ ಪೊಲೀಸರೇ ಇವರಿಬ್ಬರ ಮದುವೆಗೆ ಸಾಕ್ಷಿಯಾದರು. ಇದನ್ನೂ ಓದಿ: ಅ.13 ರಿಂದ 27ರವರೆಗೆ ಹಾಸನಾಂಬ ಜಾತ್ರೆ – ದೇವಿಯ ಆಭರಣ, ಖಜಾನೆಯಿಂದ ದೇಗುಲಕ್ಕೆ ಆಗಮನ
ಈ ಬಗ್ಗೆ ಪೊಲೀಸ್ ಠಾಣೆಯ ಅಧಿಕಾರಿ ಮಾತನಾಡಿ, ಯುವಕ – ಯುವತಿಯರಿಬ್ಬರು ಹಲವು ವರ್ಷಗಳಿಂದ ಲೀವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಆದರೆ ಆ ಪ್ರೇಮಿಗಳ ಪೋಷಕರು ಅವರ ಮದುವೆಗೆ ನಿರಾಕರಿಸಿದ್ದರು. ಆದರೆ ಇಬ್ಬರೂ ವಯಸ್ಕರಾಗಿದ್ದರಿಂದ ಅವರನ್ನು ಮದುವೆ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ RSS ಕೈಗೊಂಬೆ- ಸಿದ್ದರಾಮಯ್ಯ ವಾಗ್ದಾಳಿ