ಬೆಂಗಳೂರು: ವೀಕೆಂಡ್ ಮತ್ತು ಲೇಟ್ ನೈಟ್ ಜಾಲಿರೈಡ್ ಮಾಡುತ್ತಿದ್ದ ಪ್ರೇಮಿಗಳನ್ನು ಟಾರ್ಗೆಟ್ ಮಾಡಿಕೊಂಡು ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ನರೇಶ್ ಅಲಿಯಾಸ್ ಗುರುನರೇಶ್ ಬಂಧಿತ ನಕಲಿ ಪೊಲೀಸ್ ಅಧಿಕಾರಿ. ಬೆಂಗಳೂರಿನ ಹೆಬ್ಬಾಳ ಟು ಏರ್‍ಪೋರ್ಟ್ ರಸ್ತೆಗೆ ತಡರಾತ್ರಿ ಧಾವಿಸುತ್ತಿದ್ದ ಆರೋಪಿ, ಲೇಟ್ ನೈಟ್ ಜಾಲಿರೈಡ್ ಮಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ ತನ್ನ ಬೈಕ್ ಮೂಲಕ ಅಡ್ಡ ಹಾಕುತ್ತಿದ್ದ. ನಂತರ ಪೊಲೀಸ್ ಅಧಿಕಾರಿ ಎಂದು ಪೋಸ್ ನೀಡಿ, ಬೆದರಿಸಿ, ವಾಹನದ ದಾಖಲಾತಿಗಳನ್ನು ಕೇಳಿ ಪೊಲೀಸ್ ಠಾಣೆಗೆ ನಡೀರಿ ಎಂದು ಆವಾಜ್ ಹಾಕುತ್ತಿದ್ದ.
Advertisement
Advertisement
ಇದರಿಂದ ಬೆದರುತ್ತಿದ್ದ ಪ್ರೇಮಿಗಳು, ತಮ್ಮ ಬಳಿಯಿರುವ ಮೊಬೈಲ್, ಹಣವನ್ನು ಕೊಟ್ಟು ಹೋಗುತ್ತಿದ್ದರು. ಇದೇ ರೀತಿ ಬೈಕ್ ಸವಾರರು, ಕಾರು ಚಾಲಕರನ್ನು ಕೂಡ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
Advertisement
ನಂತರ ತಡರಾತ್ರಿ ವಾಹನವೊಂದನ್ನು ತಡೆದು ಪೊಲೀಸ್ ಎಂದು ಬೆದರಿಕೆ ಹಾಕುತ್ತಿದ್ದ ವೇಳೆ ಆರೋಪಿ ನರೇಶ್‍ನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ನರೇಶ್ ಮೆಡಿಕಲ್ ರೆಪ್ರೆಸೆಂಟೇಟಿವ್ ಎಂಬುದು ಬೆಳಕಿಗೆ ಬಂದಿದೆ. ಇತರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಆರೋಪಿ ನರೇಶ್ ಪೊಲೀಸ್ ಎಂದು ಬೆದರಿಸಿ ಹಣ ವಸೂಲಿ ಮಾಡಿರುವುದು ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.