ಕೊಪ್ಪಳ: ಪೋಷಕರು ಹಾಗೂ ಪೊಲೀಸರು ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂಬ ಆತಂಕದಲ್ಲಿ ಕಾಲುವೆಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳದ ಮುನಿರಾಬಾದ್ ಗ್ರಾಮದ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಪ್ರವೀಣ ಕುಮಾರ(18) ಹಾಗೂ ಸಾಣಾಪುರ ಗ್ರಾಮದ ಅಂಜಲಿ (18) ಮೃತರು.ಇದನ್ನೂ ಓದಿ: ಬಾಹುಬಲಿಗೆ ದಶಕದ ಸಂಭ್ರಮ: ಗುಡ್‌ನ್ಯೂಸ್ ಕೊಟ್ಟ ಜಕ್ಕಣ್ಣ
ಪಾಲಕರು ವಿರೋಧಿಸಿದ್ದಕ್ಕೆ ಅಪ್ರಾಪ್ತ ಪ್ರೇಮಿಗಳು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ 2 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮೊದಲು ಪ್ರವೀಣಕುಮಾರ್ ಕುಟುಂಬ ಸಾಣಾಪೂರ ಗ್ರಾಮದಲ್ಲಿ ವಾಸವಿತ್ತು. ಈ ವೇಳೆ ಅಂಜಲಿ ಪರಿಚಯವಾಗಿ ಪ್ರೀತಿ ಹುಟ್ಟಿಕೊಂಡಿತ್ತು. ಇತ್ತೀಚಿಗೆ ಪ್ರವೀಣಕುಮಾರ್ ಅಂಜಲಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆಗ ಪ್ರವೀಣ ತಾಯಿ ಅಂಜಲಿಯನ್ನು ಅವರ ಮನೆಗೆ ಬಿಟ್ಟು ಬರುವಂತೆ ತಿಳಿಸಿದ್ದರು. ಅದರಂತೆ ಪ್ರವೀಣ ಬಿಟ್ಟು ಬಂದಿದ್ದ.
ಇದೆಲ್ಲ ಆದ ಬಳಿಕ ಇತ್ತೀಚಿಗೆ ಅಂಜಲಿ ಜೊತೆಗೆ ಮನೆ ಬಿಟ್ಟು ಹೋಗಿದ್ದ. ಈ ವೇಳೆ ಅವರಿಬ್ಬರೂ ಹಗರಿಬೊಮ್ಮನಹಳ್ಳಿಯಲ್ಲಿರುವುದು ಕುಟುಂಬಸ್ಥರಿಗೆ ಗೊತ್ತಾಗಿತ್ತು. ಆಗ ಪ್ರವೀಣಕುಮಾರ್ ತಾಯಿ ಊರಿಗೆ ಬರಲು ಕಾರನ್ನು ಕಳುಹಿಸಿಕೊಟ್ಟಿದ್ದರು. ಕಾರಿನಲ್ಲಿ ಬರುವಾಗ ಮುನಿರಾಬಾದ್ ಬಳಿ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಹೇಳಿ ಇವರಿಬ್ಬರೂ ನೇರವಾಗಿ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಮುಂದಾದ ಸರ್ಕಾರ