ಮುಂಬೈ: ಪ್ರಿಯಕರನೊಬ್ಬ ತನ್ನ 19 ವರ್ಷದ ಪ್ರೇಯಸಿಯ ನಡವಳಿಕೆಯ ಮೇಲೆ ಅನುಮಾನಗೊಂಡು ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ.
ನಾಗ್ಪುರ ನಿವಾಸಿ ಖುಷಿ ಪರಿಹಾರ್ ಕೊಲೆಯಾದ ಯುವತಿ. ಆರೋಪಿ ಪ್ರಿಯಕರನನ್ನು ಅಶ್ರಾಫ್ ಶೇಖ್ ಎಂದು ಗುರುತಿಸಲಾಗಿದೆ. ಪಂಧೂರ್ನಾ-ನಾಗ್ಪುರ ಹೆದ್ದಾರಿಯಲ್ಲಿ ಮುಖವನ್ನು ಜಜ್ಜಿ ಕೊಲೆ ಮಾಡಿರುವ ರೀತಿಯಲ್ಲಿ ಯುವತಿ ಶವ ಶನಿವಾರ ಪತ್ತೆಯಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಸಾಮಾಜಿಕ ಜಾಲತಾಣಗಳ ಮೂಲಕ ಆಕೆಯ ಗುರುತನ್ನು ಪತ್ತೆ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಮೃತ ಖುಷಿ ಪರಿಹಾರ್ ಸ್ಥಳೀಯ ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದಳು. ಜೊತೆಗೆ ಮಾಡೆಲ್ ಆಗಬೇಕೆಂಬ ಆಸೆ ಹೊಂದಿದ್ದಳು ಎಂದು ತಿಳಿದುಬಂದಿದೆ. ಈ ಕುರಿತು ತನಿಖೆ ಶುರು ಮಾಡಿ ಅನುಮಾನದ ಮೇರೆಗೆ ಆಕೆಯ ಪ್ರಿಯಕರ ಅಶ್ರಾಫ್ ಶೇಖ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದೆವು. ಆಗ ಆರೋಪಿ ಶೇಖ್ ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಖುಷಿಯ ನಡವಳಿಕೆಯ ಸರಿಯಿರಲಿಲ್ಲ. ಜೊತೆಗೆ ಆಕೆ ಕೆಲವು ಯುವಕರೊಂದಿಗೆ ಕ್ಲೋಸಾಗಿ ಇದ್ದಳು ಎಂದು ಅನುಮಾನಗೊಂಡು ಆರೋಪಿ ಶೇಖ್ ಕೊಲೆ ಮಾಡಿದ್ದಾನೆ. ಜುಲೈ 12 ರಂದು ಅಶ್ರಾಫ್ ಶೇಖ್ ತನ್ನ ಕಾರಿನಲ್ಲಿ ಖುಷಿ ಪರಿಹಾರ್ನನ್ನು ಕರೆದುಕೊಂಡು ಹೋಗಿದ್ದನು. ನಂತರ ಪಂಧೂರ್ನಾ-ನಾಗ್ಪುರ ಹೆದ್ದಾರಿ ಬಳಿಯ ಸಾವ್ಲಿ ಫಟಾದಲ್ಲಿ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿ ಶೇಖ್ನನ್ನು ಪೊಲೀಸರು ಬಂಧಿಸಿದ್ದಾರೆ. ನಾಗ್ಪುರ್ (ಗ್ರಾಮೀಣ) ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.