ಚಿಕ್ಕಬಳ್ಳಾಪುರ: ಅವರಿಬ್ಬರು 4 ವರ್ಷ ಪರಸ್ಪರ ಪ್ರೀತಿಸಿದ್ರೂ (Love) ಮದುವೆಯಾಗೋಗೆ ಜಾತಿ ಅಡ್ಡ ಬಂದಿತ್ತು. ಕೊನೆಗೆ ಪ್ರಿಯತಮೆ ತಾನಾಯ್ತು ತನ್ನ ಪಾಡಾಯ್ತು ಅಂತ ಮನೆಯವರು ತೋರಿಸಿದ ಯುವಕನನ್ನ ವರಿಸಿ ಗಂಡನ ಜೊತೆ ಸುಃಖ ಸಂಸಾರ ನಡೆಸುತ್ತಿದ್ದಳು. ಆದ್ರೆ ಮದುವೆಯಾಗಿ (Marriage) 20 ದಿನ ಕಳೆಯೋದ್ರೊಳಗೆ ವಿಲನ್ ಆಗಿರೋ ಆಕೆಯ ಪ್ರಿಯಕರ ಅವರಿಬ್ಬರ ಖಾಸಗಿ ವಿಡಿಯೋಗಳನ್ನ ಗಂಡನಿಗೆ ಕಳುಹಿಸಿದ್ದಾನೆ.
ಇದ್ರಿಂದ ಕೆರಳಿ ಕೆಂಡವಾದ ಆಕೆಯ ಗಂಡ ಕಟ್ಟಿದ್ದ ತಾಳಿ ಕಿತ್ತುಕೊಂಡು ಮನೆಯಿಂದ ಹೊರಹಾಕಿದ್ದಾನೆ. ಹೀಗಾಗಿ ನೊಂದ ಯುವತಿ ಸೀದಾ ಇದಕ್ಕೆಲ್ಲಾ ಪ್ರಿಯಕರನೇ ಕಾರಣ ಅಂತ ಆತನ ಮನೆಯ ಎದುರು ಧರಣಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಮಹಿಳೆಯರು ಗಂಡನ ಜೊತೆ ಮಲಗೋಕೆ, ಮಕ್ಕಳು ಮಾಡೋಕೆ ಮಾತ್ರ: ಕೇರಳ ಸಿಪಿಎಂ ಮುಖಂಡನ ಭಾಷಣಕ್ಕೆ ತೀವ್ರ ವಿರೋಧ
ಏನಿದು ಘಟನೆ?
ಪಲಿಚೆರ್ಲು ಗ್ರಾಮದ ಅಂಬರೀಶ್, ಬೇರೆ ಜಾತಿಯಾಗಿದ್ರೂ ಕೆಂಪನಹಳ್ಳಿ ಗ್ರಾಮದ ಯುವತಿಯನ್ನ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ. ಇಬ್ಬರು ಜೊತೆ ಜೊತೆಯಾಗಿ ಫೋಟೋ ವಿಡಿಯೋ ತೆಗೆಸಿಕೊಂಡಿದ್ದರಂತೆ. ಆದ್ರೆ ಈ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಯುವತಿಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯ ಮಾಡಿದ್ದಾರೆ. ಈ ವೇಳೆ ಪ್ರಿಯಕರ ಸಹ ಬೇರೆ ಬೇರೆ ಜಾತಿ ಇದ್ರಿಂದ ಸಮಸ್ಯೆ ಯಾಕೆ..? ನೀನು ಮನೆಯವರನ್ನ ನೋಡಿದವರನ್ನ ಮದುವೆಯಾಗುವಂತೆ ಹೇಳಿದ್ದನಂತೆ. ಹೀಗಾಗಿ ಪ್ರೇಮಾ ಬೇರೆ ಯುವಕನನ್ನ ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿ ಆರಾಮಾಗಿದ್ಲು. ಅಷ್ಟರಲ್ಲೇ ಪ್ರಿಯಕರ ಅಂಬರೀಶ್ ಇತರರು ಸೇರಿ ಹಳೆಯ ಫೋಟೋ ವಿಡಿಯೊಗಳನ್ನ ಗಂಡನಿಗೆ ಕಳುಹಿಸಿದ್ದಾರಂತೆ. ಇದ್ರಿಂದ ಗಂಡ ಆಕೆಯನ್ನ ಮನೆಯಿಂದ ಹೊರಹಾಕಿದ್ದಾನೆ. ಹೀಗಾಗಿ ನೊಂದ ಯುವತಿ ಪ್ರಿಯಕರ ಅಂಬರೀಶ್ ಮನೆ ಎದುರು ಧರಣಿ ನಡೆಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಳೆ. ಅಂಬರೀಶ್ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Sidlaghatta Rural Police Station) ದೂರು ನೀಡಿದ್ದಾಳೆ. ಇದನ್ನೂ ಓದಿ: Ramanagara | ಕೌಟುಂಬಿಕ ಕಲಹ – ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ


