ಬಾಗಲಕೋಟೆ: ಪ್ರೇಮಿಯೊಬ್ಬ ಪ್ರಿಯತಮೆಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಮನೆಯವರು ಆರೋಪಿಸಿರುವ ಘಟನೆ ಬೀಳಗಿ (Beelagi) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ರುಕ್ಕವ್ವ (19) ವಡವಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಅ.02 ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯುವತಿಯ ತಂದೆ ರುದ್ರಪ್ಪ ನನ್ನ ಮಗಳ ಸಾವಿಗೆ ಪ್ರೀತಿಸಿ ಕೈಕೊಟ್ಟ ಶಂಕ್ರಪ್ಪ ಪತ್ತಾರ ಕಾರಣ ಎಂದು ಆರೋಪಿಸಿ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇಲ್ಲಿಯವರೆಗೆ ಬೀಳಗಿ ಪೊಲೀಸರು ಆತನನ್ನ ಬಂಧಿಸಿಲ್ಲ ಎಂದು ಆರೋಪಿಸಿ ಯುವತಿಯ ತಂದೆ ಸೋಮವಾರ ಬಾಗಲಕೋಟೆ ಎಸ್‌ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ
ಸುಮಾರು ವರ್ಷಗಳಿಂದ ಯುವಕ ಶಂಕ್ರಪ್ಪ ಪತ್ತಾರ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಮದುವೆ ಆಗಲು ನಿರಾಕರಿಸಿದ್ದ. ನನ್ನ ಮಗಳ ಸಾವಿಗೆ ಶಂಕ್ರಪ್ಪ ಮಾಡಿದ ನಿರಾಕರಣೆಯೇ ಕಾರಣ ಎಂದು ಪ್ರಿಯಕರ ಮಾಡಿದ ವಾಟ್ಸಪ್ ಮೆಸೇಜ್, ಫೋಟೋಗಳನ್ನ ಸಾಕ್ಷಿಯಾಗಿ ಇಟ್ಟುಕೊಂಡು ದೂರು ನೀಡಲು ಯುವತಿಯ ತಂದೆ ಮುಂದಾಗಿದ್ದಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ
ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ಆರೋಪಿ ಶಂಕ್ರಪ್ಪನನ್ನ ಬೀಳಗಿ ಪೊಲೀಸರು ಬಂಧಿಸಿಲ್ಲ. ಬದಲಾಗಿ ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿದ್ದಾರೆ. ಆತನಿಗೆ ಜಾಮೀನು ಸಿಗುವಂತೆ ಮಾಡಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್ ಗೆಲ್ಲಿಸಿ: ಹೆಚ್‌ಡಿಕೆ ಮನವಿ
ಹೀಗೆ ಆರೋಪಿಗಳು ಜಾಮೀನು ಪಡೆದು ಓಡಾಡುತ್ತಿರುವುದನ್ನ ಕಂಡ ರುದ್ರಪ್ಪ, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಅಮರನಾಥ್ ರೆಡ್ಡಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು