Connect with us

Bengaluru City

ಅತ್ತೆ ಕೊಲೆ- ಅಕ್ರಮ ಸಂಬಂಧಕ್ಕೆ ಸೇತುವೆ ಆಗಿದ್ದು ರಾಂಗ್ ನಂಬರ್

Published

on

-ತಪ್ಪಿ ಬಂದ ಕರೆಗೆ ರಾಂಗ್ ಕನೆಕ್ಷನ್ ಕೊಟ್ಟ
-ಸೊಸೆಯ ಪಲ್ಲಂಗದಾಟ ನೋಡಿದ ಅತ್ತೆ

ಬೆಂಗಳೂರು: ಬಾವನ ನಂಬರಿಗೆ ಕರೆ ಮಾಡುವುದಕ್ಕೆ ಹೋಗಿ ರಾಂಗ್ ನಂಬರಿಗೆ ಕರೆ ಮಾಡಿದ್ದೆ ಆರೋಪಿಗಳಿಬ್ಬರ ಅಕ್ರಮ ಸಂಬಂಧಕ್ಕೆ ರಹದಾರಿ ಮಾಡಿಕೊಟ್ಟಿತ್ತು.

2018ರಲ್ಲಿ ಕೊಲೆ ಆರೋಪಿ ಸೌಂದರ್ಯ ತನ್ನ ಬಾವನಿಗೆ ಕರೆ ಮಾಡಿದ್ದಾಳೆ. ಆಕಸ್ಮಿಕವಾಗಿ ಅದು ಆರೋಪಿ ನವೀನ್ ಜಡೇಸ್ವಾಮಿಗೆ ಹೋಗಿದೆ. ವೃತ್ತಿಯಲ್ಲಿ ಲೈನ್‍ಮ್ಯಾನ್ ಆಗಿದ್ದ ಆರೋಪಿ ಜಡೇಸ್ವಾಮಿ ರಾಂಗ್ ಕಲೆಕ್ಷನ್ ಕೊಟ್ಟೆ ಬಿಟ್ಟಿದ್ದಾನೆ. ರಾಂಗ್ ಕಲೆಕ್ಷನ್ ಅಮರ ಪ್ರೇಮಿಗಳಿಬ್ಬರಿಗೆ ಜೈಲು ಸೇರುವಂತೆ ಮಾಡಿದೆ. ಸೌಂದರ್ಯ ಎರಡು ವರ್ಷಗಳಿಂದ ತನ್ನ ಸೌಂದರ್ಯವನ್ನು ಲೈನ್‍ಮ್ಯಾನ್ ಜಡೇಸ್ವಾಮಿಗೆ ದಾರೆ ಏರೆದಿದ್ದಾಳೆ. ಅದು ಮೊನ್ನೆ ಕೊಲೆ ಆಗುವ ತನಕ ಯಾರಿಗೂ ಗೊತ್ತಿರಲಿಲ್ಲ. ಇದನ್ನೂ ಓದಿ: ಪ್ರಿಯಕರನೊಂದಿಗೆ ಅತ್ತೆಯ ಕೈಗೆ ಸಿಕ್ಕಿಬಿದ್ದಳು- ಸೊಸೆಯಿಂದ ಅತ್ತೆಯ ಕೊಲೆ

ಪತಿ ಹಾಗೂ ಅತ್ತೆ ರಾಜಮ್ಮಳಿಗೆ ಗೊತ್ತೆ ಆಗದಂತೆ ಇಬ್ಬರು ಕಣ್ಣಾಮುಚ್ಚಾಲೆ ಆಟ ಆಡಿದ್ದಾರೆ. ಕಳೆದ ವಾರ ಸೌಂದರ್ಯ ಹಾಗೂ ಪ್ರಿಯಕರ ಪಲ್ಲಂಗದಾಟದಲ್ಲಿ ತೊಡಗಿದ್ದಾಗ ಅತ್ತೆ ರಾಜಮ್ಮನ ಕೈಯಲ್ಲಿ ರೆಡ್ ಹ್ಯಾಂಡ್ ಹಾಗಿ ಸಿಕ್ಕಿ ಬಿದ್ದಿದ್ದಾರೆ. ಕಳೆದ ಒಂದೂವರೆ ಎರಡು ವರ್ಷದಿಂದ ಕಾಪಾಡಿಕೊಂಡ ಬಂದ ಅಕ್ರಮ ಸಂಬಂಧ ರಹಸ್ಯ ಬಯಲಾಗಿದ್ದು, ಇಬ್ಬರಲ್ಲೂ ಆತಂಕ ಹುಟ್ಟಿಸಿದೆ. ಸೌಂದರ್ಯ ಪತಿಗೆ ಇಬ್ಬರ ಲವ್ವಿಡವ್ವಿ ವಿಚಾರವನ್ನು ಹೇಳುತ್ತಾಳೆ ಎಂದು ಹೇಳಿದ್ದಕ್ಕೆ ಆರೋಪಿ ನವೀನ್ ಜಡೆಸ್ವಾಮಿ, ರಾಜಮ್ಮ ಎಲೆ ಅಡಿಕೆ ಜಜ್ಜುಲು ಬಳಸುತ್ತಿದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.

ಪತಿ ಮನೆಗೆ ಬಂದಾಗ ಯಾರೋ ಕೊಲೆ ಮಾಡಿ ಹೋಗಿದ್ದಾರೆ ಎಂದು ಪತಿಗೆ ನಂಬಿಸಿದ್ದಾಳೆ. ಪತಿ ತನ್ನ ಪತ್ನಿ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದರಿಂದ ಆರೋಪಿ ಸೌಂದರ್ಯಳ ಮಾತು ನಂಬಿ ಘಟನೆ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದಾಗ ಪೊಲೀಸರು ಕೂಡ ಚಿನ್ನಾಭರಣಕ್ಕಾಗಿ ಕಳ್ಳರು ಕೃತ್ಯ ಎಸಗಿರಬೇಕು ಎಂದುಕೊಂಡು ತಲೆ ಕೆಡಿಸಿಕೊಂಡಿರುತ್ತಾರೆ.

ಪೊಲೀಸರು ಘಟನೆಯನ್ನು ಮೊದಲು ಆರೋಪಿ ಸೌಂದರ್ಯ ನೋಡಿದ್ದರಿಂದ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಠಾಣೆಗೆ ಕರೆದಿದ್ದಾರೆ. ಈ ವೇಳೆ ಸೌಂದರ್ಯ ನಡುವಳಿಕೆ ಪೊಲೀಸರಿಗೆ ಇವಳ ಕೈವಾಡ ಇರಬಹುದೆಂದು ಶಂಕಿಸಿ ವಿಚಾರಣೆ ಚುರುಕುಗೊಳಿಸಿದಾಗ ನವೀನ್ ಜೊತೆ ಇದ್ದ ಅಕ್ರಮ ಸಂಬಂಧ ರಹಸ್ಯ ಬಿಚ್ಚಿಟ್ಟಿದ್ದಾಳೆ. ಅಕ್ರಮ ಸಂಬಂಧ ವಿಚಾರ ಅತ್ತೆ ರಾಜಮ್ಮ ಪತಿಗೆ ಹೇಳುತ್ತಾಳೆ ಎನ್ನುವ ಕಾರಣಕ್ಕೆ ಇಬ್ಬರು ಸೇರಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

Click to comment

Leave a Reply

Your email address will not be published. Required fields are marked *