ಬೀಜಿಂಗ್: ಪ್ರಿಯಕರ ತನ್ನ ಮೆಸೇಜ್‍ಗೆ ರಿಪ್ಲೈ ಮಾಡುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಅನೇಕ ಹುಡುಗಿಯರು ಬೇಸರ ಮಾಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ಸದಾ ಪ್ರೇಯಸಿಯನ್ನು ಸಂತೋಷದಿಂದ ಇಟ್ಟುಕೊಳ್ಳಲು ಚೈನೀಸ್ ಸಾಫ್ಟ್ ವೇರ್ ಎಂಜಿನಿಯರ್ ಬ್ರಿಲಿಯಂಟ್ ಉಪಾಯ ಕಂಡು ಹಿಡಿದಿದ್ದಾರೆ.
ಲಿ ಕೈಕ್ಸಿಯಾಂಗ್ ಕೆಲಸದ ಬ್ಯುಸಿ ಇರುವ ವೇಳೆ ಗೆಳೆತಿಯ ಜೊತೆ ಚಾಟ್ ಮಾಡಲು ಚಾಟ್‍ಬಾಟ್ ಅನ್ನು ಸಾಫ್ಟ್ ವೇರ್ ಎಂಜಿನಿಯರ್ ಕಂಡು ಹಿಡಿದಿದ್ದಾನೆ. ಈ ರೋಬೋಟ್ “ಬೇಬಿ ಇದು ನಮ್ಮ 618ನೇ ಭೇಟಿಯಾಗಿದ್ದು, ನೀನು ಸುಂದರ ಬಿಸಿಲನ್ನು ಎಂಜಾಯ್ ಮಾಡುತ್ತಿದ್ದೀಯಾ ಎಂದು ಭಾವಿಸಿದ್ದೇನೆ” ಎಂದು ಇದೇ ರೀತಿ ಅನೇಕ ರೀತಿಯ ರೊಮ್ಯಾಂಟಿಕ್ ಆಗಿ ಸಂದೇಶ ಕಳುಹಿಸುತ್ತದೆ.
Advertisement
Advertisement
ಲಿ ಕೈಕ್ಸಿಯಾಂಗ್ ತನ್ನ ಕೆಲಸದ ಒತ್ತಡದಿಂದ ಪ್ರೇಯಸಿಯ ಮೆಸೇಜ್‍ಗಳನ್ನು ಕಡೆಗಣಿಸುತ್ತಿದ್ದೇನೆ, ಜೊತೆಗೆ ಆಕೆಗೆ ಸಮಯವನ್ನು ಕೊಡಲು ಸಾಧ್ಯವಾಗುತಿಲ್ಲ ಎಂಬುದು ಅರ್ಥ ಆಗಿದೆ. ಇದರಿಂದ ಪ್ರಿಯಕರ ತನ್ನ ಪ್ರೇಯಿಸಿಗೆ ಪ್ರತಿಕ್ರಿಯಿಸಲು ಚಾಟ್‍ಬಾಟ್ ಡಿಸೈನ್ ಮಾಡಲು ನಿರ್ಧರಿಸಿದ್ದನು.
Advertisement
ಅದರಂತೆಯೇ ಪ್ರಿಯಕರ ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊ ಮೂಲಕ ಚಾಟ್‍ಬಾಟ್ ಸೃಷ್ಟಿಸಿದ್ದನು. ಈ ಚಾಟ್‍ಬಾಟ್ ಲಿ ಕೈಕ್ಸಿಯಾಂಗ್ ಕೆಲಸದ ವೇಳೆ ಬ್ಯುಸಿ ಇದ್ದಾಗ ಪ್ರೇಯಸಿಯ ಜೊತೆ 300ಕ್ಕೂ ಹೆಚ್ಚು ಬಾರಿ ಚಾಟ್ ಮಾಡಿದೆ ಎಂದು ವರದಿ ಮಾಡಿದೆ.
Advertisement
ಹೀಗೆ ಮೆಸೇಜ್ ಮಾಡುತ್ತಿದ್ದಂತೆ ಆ ಮೆಸೇಜ್‍ಗಳಲ್ಲಿ ಏನೋ ದೋಷವಿದೆ ಎಂಬ ಅನುಮಾನ ಪ್ರೇಯಸಿಗೆ ಬಂದಿದೆ. ಪ್ರಿಯಕರ ಸಹಜವಾಗಿ ತಡವಾಗಿ ರಿಪ್ಲೈ ಮಾಡುತ್ತಿದ್ದನು. ಆದರೆ ಇತ್ತೀಚೆಗೆ ಬಹು ಬೇಗ ಉತ್ತರಿಸುತ್ತಿದ್ದಾನೆ. (How can I respond when there’s no problem?) ಸಮಸ್ಯೆಯೇ ಇಲ್ಲದಿದ್ದಾಗ ನಾನು ಹೇಗೆ ಸ್ಪಂದಿಸಲಿ ಎಂದು ಒಂದು ಮೆಸೇಜ್ ಹೋಗಿದೆ.
ಇದೀಗ ಲಿ ಕೈಕ್ಸಿಯಾಂಗ್ ವೀಬೋ ಖಾತೆ ಡಿಲೀಟ್ ಆಗಿದೆ. ಆದರೆ ಆತ ಪ್ರೇಯಸಿ ಮಾಡಿದ ಚಾಟ್‍ನ ಸ್ಕ್ರೀನ್‍ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.