ಬಾಗಲಕೋಟೆ: ಪ್ರೇಯಸಿ (Lover) ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆ (Bagalkote) ಜಿಲ್ಲೆ ರಬಕವಿಬನಹಟ್ಟಿಯ ಅಸ್ಕಿ (Aski ) ಗ್ರಾಮ ಹಾಗೂ ಬನಹಟ್ಟಿ (Banahatti) ನಗರದಲ್ಲಿ ನಡೆದಿದೆ.
ಪವಿತ್ರಾ ಒಂಟಿ (19), ಕಾರ್ತಿಕ್ ನಾಯಕ್(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಪವಿತ್ರಾ ಬನಹಟ್ಟಿಯ ಕೆಹೆಚ್‌ಡಿಸಿ ಕಾಲೋನಿ ನಿವಾಸಿಯಾಗಿದ್ದಳು. ಕಾರ್ತಿಕ್ ಅಸ್ಕಿ ಗ್ರಾಮದ ಹುಡುಗ. ಮಂಗಳವಾರ ಇವರಿಬ್ಬರ ಮಧ್ಯೆ ವೈಮನಸ್ಸಿನಿಂದ ಜಗಳ ನಡೆದಿತ್ತು. ಇದಾದ ಬಳಿಕ ಮನನೊಂದು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇದನ್ನೂ ಓದಿ: ತೀರ್ಥಹಳ್ಳಿ | ತುಂಗಾ ನದಿಯಲ್ಲಿ ಮುಳುಗಿ ಯುವಕ ದುರ್ಮರಣ
ಈ ಸುದ್ದಿ ಕೇಳಿದ ನಂತರ ಮನನೊಂದು ಪ್ರಿಯಕರ ಕಾರ್ತಿಕ್ ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಗೆ ಮುಖಭಂಗ – ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ ಎಂದ ಇಸ್ರೇಲ್

