ಚಂಡೀಗಢ: ಶ್ರೀರಾಮನನ್ನು ಅವಹೇಳನ ಮಾಡಿದ ಆರೋಪದ ಮೇಲೆ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಸಹಾಯಕ ಪ್ರಾಧ್ಯಾಪಕಿಯನ್ನು ವಜಾಗೊಳಿಸಲಾಗಿದೆ.
ಪಂಜಾಬ್‍ನ ಜಂದರ್‌ನಲ್ಲಿ ಈ ಘಟನೆ ನಡೆದಿದೆ. ಗುಸಾರ್ಂಗ್ ಪ್ರೀತ್ ಕೌರ್ ವಜಾಗೊಂಡ ಸಹಾಯಕ ಪ್ರಾಧ್ಯಾಪಕಿ. ಶ್ರೀರಾಮನಿಗೆ ಅವಹೇಳನ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಆಕೆಯನ್ನು ವಜಾಗೊಳಿಸುವಂತೆ ಒತ್ತಾಯಿಸಲಾಗಿತ್ತು.
ವೀಡಿಯೋದಲ್ಲಿ ಏನಿದೆ?: ಶ್ರೀರಾಮ ಒಳ್ಳೆಯ ವ್ಯಕ್ತಿಯಲ್ಲ. ರಾವಣ ಒಳ್ಳೆಯ ವ್ಯಕ್ತಿ. ರಾಮ ಒಬ್ಬ ಕುತಂತ್ರದ ವ್ಯಕ್ತಿ ಎಂದು ನಾನು ಕಂಡುಕೊಂಡಿದ್ದೇನೆ. ಸೀತೆಯನ್ನು ಬಲೆಗೆ ಬೀಳಿಸಲು ಎಲ್ಲಾ ಉಪಾಯ ಮಾಡಿದನು. ಅವನು ಸೀತೆಯನ್ನು ತೊಂದರೆಗೆ ಸಿಲುಕಿಸಿದನು ಮತ್ತು ರಾವಣನ ಮೇಲೆ ಎಲ್ಲಾ ದೋಷಗಳನ್ನು ಹಾಕಿದನು. ಇಡೀ ಜಗತ್ತು ರಾಮನನ್ನು ಪೂಜಿಸುತ್ತಿದೆ ಮತ್ತು ರಾವಣ ಕೆಟ್ಟ ವ್ಯಕ್ತಿ ಎಂದು ಹೇಳುತ್ತಿದೆ ಎಂದು ಹೇಳಿದ್ದಳು. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್
View this post on Instagram
ಈ ಬಗ್ಗೆ ವಿಶ್ವವಿದ್ಯಾಲಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗುರ್ಸಾಂಗ್ ಪ್ರೀತ್ ನೀಡುವ ಹೇಳಿಕೆಗಳೆಲ್ಲವೂ ವೈಯಕ್ತಿಕವಾಗಿವೆ. ಇವು ಯಾವುದು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿಲ್ಲ. ನಾವು ಯಾವಾಗಲೂ ಜಾತ್ಯಾತೀತ ವಿಶ್ವವಿದ್ಯಾನಿಲಯವಾಗಿದ್ದೇವೆ. ಎಲ್ಲಾ ಧರ್ಮಗಳು ಮತ್ತು ನಂಬಿಕೆಯ ಜನರನ್ನು ಸಮಾನವಾಗಿ ಪ್ರೀತಿ ಮತ್ತು ಗೌರವದಿಂದ ನೋಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್