BollywoodCinemaLatestMain PostNational

ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

ಮುಂಬೈ: ಬಾಲಿವುಡ್ ಲವ್​ ಬರ್ಡ್ಸ್ ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಈ ಬಾರಿ ಹೊಸವರ್ಷ ಸಂಭ್ರಮಾಚರಣೆಗೆ ಮಾಲ್ಡೀವ್ಸ್‌ಗೆ ಹಾರಿದರು.

ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದ ಈ ಜೋಡಿ ಪಾಪಾರಾಜಿಗಳಿಗೆ ಹಾಯ್ ಮಾಡಿದರು. ಈ ವೇಳೆ ಕಿಯಾರಾ ಸ್ಟೈಲಿಶ್ ಸನ್ ಗ್ಲಾಸ್ ತೊಟ್ಟು ಪಿಂಕ್ ಕಲರ್ ಸ್ಟೆಟ್ ಟಿ-ಶರ್ಟ್ ಮಾದರಿಯ ಉಡುಪು ಧರಿಸಿದ್ದರು ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವೈಟ್ ಕಲರ್ ಟಿ ಶಟ್ ಮತ್ತು ಗ್ರೀನ್ ಕಲರ್ ಜಾಕೆಟ್ ಅದಕ್ಕೆ ಸೂಟ್ ಆಗುವಂತೆ ಬ್ಲ್ಯಾಕ್ ಕಲರ್ ಸನ್ ಗ್ಲಾಸ್ ಧರಿಸಿದ್ದರು. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ

 

View this post on Instagram

 

A post shared by Viral Bhayani (@viralbhayani)

ಕಿಯಾರಾ ಹಾಗೂ ಸಿದ್ಧಾರ್ಥ್ ಇಬ್ಬರ ನಡುವೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಮೊದಲಿನಿಂದಲೂ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದ ಶೇರ್ ಷಾ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಇವರಿಬ್ಬರ ಪ್ರೀತಿ ವಿಚಾರ ಮತ್ತಷ್ಟು ಸ್ಟ್ರಾಗ್ ಆಗಿದೆ. ಇದನ್ನೂ ಓದಿ: ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

ಶೇರ್ ಷಾ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದು, ವಿಕ್ರಮ್‍ಗೆ ಜೋಡಿಯಾಗಿ ಡಿಂಪಲ್ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದರು. ಇದೊಂದು ಪ್ರೇಮ ಕಥೆ ಆಧಾರಿತ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ನಿರ್ದೇಶಕ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿದ್ದರು. ಧರ್ಮ ಪ್ರೊಡಕ್ಷನ್ಸ್ ಮತ್ತು ಕಾಶ್ ಎಂಟರ್​ಟೈನ್​ಮೆಂಟ್ ಜಂಟಿಯಾಗಿ ಬಂಡವಾಳ ಹೂಡಿದ್ದರು. 2021ರ ಆಗಸ್ಟ್ 12ರಂದು ಈ ಸಿನಿಮಾ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು.

Leave a Reply

Your email address will not be published.

Back to top button