– ಕೊಲೆ ಮಾಡಿ 3 ಗಂಟೆ ವಿಷಯ ಮುಚ್ಚಿಟ್ಟಿದ್ದ ಕುಟುಂಬಸ್ಥರು
– ಆಸ್ಪತ್ರೆಗೆ ಹೋದಾಗ ಪ್ರಕರಣ ಬೆಳಕಿಗೆ
ಲಕ್ನೋ: ಸಹೋದರಿ ಪ್ರೀತಿಸುತ್ತಿರುವ ವಿಷಯ ತಿಳಿದು ಸಹೋದರ ಸಂಬಂಧಿ ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.
ಟೀನಾ ಚೌಧರಿ ಕೊಲೆಯಾದ ಯುವತಿ. 12ನೇ ತರಗತಿಯಲ್ಲಿ ಓದುತ್ತಿರುವ ಟೀನಾ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಆಕೆ ಸಹೋದರ ಸಂಬಂಧಿ ಪ್ರಶಾಂತ್ ರೊಚ್ಚಿಗೆದ್ದು ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕುಟುಂಬಸ್ಥರು ಈ ಕೊಲೆ ವಿಷಯವನ್ನು ಮೂರು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು. ಬಳಿಕ ಟೀನಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಪೊಲೀಸರಿಗೆ ತಿಳಿದು ಬಂತು. ಇದನ್ನೂ ಓದಿ: ಅವಳನ್ನ ಕರ್ಕೊಂಡು ಹೋಗ್ತೀನಿ, ಇಲ್ಲಾಂದ್ರೆ ಶೂಟ್ ಮಾಡ್ಕೋತಿನಿ: ಪಾಗಲ್ ಪ್ರೇಮಿಯ ಹುಚ್ಚಾಟ
Advertisement
Advertisement
ದರೋಡೆಕೋರರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬಂದು ಕೊಲೆ ಮಾಡಲು ಯತ್ನಿಸಿದರು ಎಂದು ಮೊದಲು ಕುಟುಂಬಸ್ಥರು ಸುಳ್ಳು ಹೇಳಲು ಪ್ರಯತ್ನಿಸಿದರು. ಈ ಮೂಲಕ ಸಾಕ್ಷಿಗಳನ್ನು ನಾಶ ಮಾಡಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಮರಣೋತ್ತರ ವರದಿ ಬಂದಾಗ ಯುವತಿಗೆ ಮೂರು ಗುಂಡು ತಗುಲಿದ ವಿಷಯ ಬೆಳಕಿಗೆ ಬಂತು. ಮೊದಲ ಗುಂಡು ಟೀನಾಳ ತೊಡೆಯ ಭಾಗದಲ್ಲಿ, ಎರಡನೇಯ ಗುಂಡು ಆಕೆಯ ಗುಪ್ತಾಂಗದಲ್ಲಿ ಹಾಗೂ ಮೂರನೇ ಗುಂಡು ಆಕೆಯ ಸೊಂಟದಲ್ಲಿ ಪತ್ತೆಯಾಗಿತ್ತು.
Advertisement
Advertisement
ಸದ್ಯ ಪೊಲೀಸರು ಪ್ರಶಾಂತ್, ಆತನ ಪೋಷಕರ ಹಾಗೂ ಟೀನಾಳ ಪೋಷಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಎಸ್‍ಪಿ ಅವಿನಾಶ್ ಪಾಂಡೆ ಪ್ರತಿಕ್ರಿಯಿಸಿ, ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದ್ದು, ಯಾರೋ ಅದನ್ನು ಕ್ಲೀನ್ ಮಾಡಲು ಪ್ರಯತ್ನಿಸಿದ್ದರು. ಸ್ಥಳದಲ್ಲಿ ಬಳೆಗಳ ಚೂರು ಪತ್ತೆಯಾಗಿದೆ. ಇದರಿಂದ ಟೀನಾಳನ್ನು ಬಲವಂತ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಸದ್ಯ ಪ್ರಶಾಂತ್, ಆತನ ಪೋಷಕರನ್ನು ಹಾಗೂ ಟೀನಾಳ ಪೋಷಕರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಟೀನಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ಆಕೆಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೆ ಈ ಸಂಬಂಧವನ್ನು ಅವರು ನಿರಾಕರಿಸಿದ್ದರು. ಟೀನಾ ನಾನು ಆ ಯುವಕನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಾಗ ಆಕೆಯ ಪೋಷಕರು ಆಕೆಯನ್ನು ರೂಮಿನಲ್ಲಿ ಲಾಕ್ ಮಾಡಿದ್ದರು. ಟೀನಾಳ ಮನೆಯ ಹತ್ತಿರದಲ್ಲೇ ಪ್ರಶಾಂತ್ ಮನೆ ಕೂಡ ಇತ್ತು. ಹಲವು ದಿನಗಳಿಂದ ಪ್ರಶಾಂತ್‍ಗೆ ಈ ಸಂಬಂಧ ಇಷ್ಟವಿರಲಿಲ್ಲ.
ಶನಿವಾರ ಟೀನಾ ಯಾವುದೋ ಕೆಲಸದ ಮೇಲೆ ಪ್ರಶಾಂತ್ ಮನೆಗೆ ಹೋಗಿದ್ದಳು. ಈ ವೇಳೆ ಪ್ರಶಾಂತ್, ಟೀನಾಳಿಗೆ ಪ್ರೀತಿ-ಪ್ರೇಮದಿಂದ ದೂರ ಇರುವಂತೆ ಹೇಳಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಟೀನಾ, ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪ್ರಶಾಂತ್ ಆಕೆಯ ಮೇಲೆ ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಟೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.