ಕ್ರಿಕೆಟಿಗ ಯಜುವೇಂದ್ರ ಚಾಹಲ್ (Yuzvendra Chahal) ಪತ್ನಿ ಧನಶ್ರೀ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಹೊಸ ಅವತಾರದಲ್ಲಿ ‘ಲವ್ ಸೆಕ್ಸ್ ಔರ್ ದೋಖಾ 2’ (Love Sex Aur Dhokha 2) ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿನ ಹಾಡಿಗೆ ನಟಿ ಸೊಂಟ ಬಳುಕಿಸಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆಯಾಗಿದೆ.
ಕಮ್ಸನ್ ಕಾಲಿ ಹಾಡಿನಲ್ಲಿ ಟೋನಿ ಕಕ್ಕರ್ ಜೊತೆ ಧನಶ್ರೀ ವರ್ಮಾ (Dhanashree Verma) ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ಧನಶ್ರೀ ವರ್ಮಾ ಮಿಂಚಿದ್ದು, ಟೋನಿ ಕಕ್ಕರ್ ಜೊತೆ ನಟಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡಿನಲ್ಲಿ ಸೊಂಟಕ್ಕೆ ಚಿವುಟುವ ದೃಶ್ಯವನ್ನು ಹಾಕಲಾಗಿದೆ. ಸಾಂಗ್‌ನಲ್ಲಿ ಧನಶ್ರೀ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಿಜೆಪಿ ಸೇರ್ಪಡೆ ವದಂತಿಗೆ ಪ್ರಕಾಶ್ ರಾಜ್ ಸ್ಪಷ್ಟನೆ
View this post on Instagram
ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ದೋಖಾ 2’ ಸಿನಿಮಾ ಏ.19ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಕೂಡ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.
‘ಲವ್ ಸೆಕ್ಸ್ ಔರ್ ದೋಖಾ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ನಟಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದಿನ ಯುವ ಪೀಳಿಗೆಯಲ್ಲಿ ಇಂಟರ್‌ನೆಟ್‌ನಿಂದ ಆಗುವ ತೊಂದರೆಗಳ ಬಗ್ಗೆ ಸಿನಿಮಾದಲ್ಲಿ ತೋರಿಸಲಾಗಿದೆ.