ಬೆಳಗಾವಿ: ಪ್ರೀತಿಸಲು ಒಪ್ಪದ ಯುವತಿಯ ಫೋಟೋವನ್ನು ನಗ್ನ ಚಿತ್ರವೊಂದಕ್ಕೆ ಜೋಡಿಸಿ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧನಕ್ಕೊಳಗಾದ ಆರೋಪಿಯನ್ನು ಮಂಥನ್ ಪಾಟೀಲ್ (22) ಎಂದು ಗುರುತಿಸಲಾಗಿದೆ. ಆರೋಪಿ ಖಾನಾಪುರದ (Khanapur ) ಕಾಲೇಜಿನ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಆಕೆಯ ಫೋಟೋವನ್ನು ನಗ್ನ ಚಿತ್ರದ ಜೊತೆ ಸೇರಿಸಿ ಎಡಿಟ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಆಕೆಯ ಮೂವರು ಸ್ನೇಹಿತೆಯರ ಫೋಟೋ ಬಳಸಿ ಇದೇ ರೀತಿ ಬ್ಲಾಕ್‍ಮೇಲ್ ಮಾಡಿದ್ದಾನೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಅಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದನ್ನೂ ಓದಿ: PublicTV Explainer: ‘ಸೋಷಿಯಲ್’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?
Advertisement
Advertisement
ಆರೋಪಿ ಬೆಂಗಳೂರಿನಲ್ಲಿ (Bengaluru) ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಡೀಪ್ ಫೇಕ್ ಆಪ್ ಮಾದರಿಯ ಮತ್ತೊಂದು ಆಪ್‍ನಲ್ಲಿ ಫೋಟೋ ಎಡಿಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಯುವತಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಏನಿದು ಡೀಪ್‌ಫೇಕ್ ತಂತ್ರಜ್ಞಾನ? ಹೇಗೆ ಮಾಡುತ್ತಾರೆ? – ನೀವು ತಿಳ್ಕೋಳ್ಳಲೇಬೇಕು