ಪ್ರಿಯಕರ ಜೊತೆ ಹೋದ ಯುವತಿಯನ್ನ ರೇಪ್ ಮಾಡಿ ಕೊಲೆ

Public TV
1 Min Read
BLY LOVE copy

-ಎದುರ್‍ಮನೆ ಯುವಕನ ಪ್ರೇಮದ ಬಲೆಗೆ ಬಿದ್ದ ಯುವತಿಯ ದುರಂತ ಕಥೆ

ಬಳ್ಳಾರಿ: ಎದುರು ಮನೆಯ ಹುಡುಗನನ್ನು ಪ್ರೀತಿಸಿ ಮನೆಯವರ ವಿರೋಧವೂ ಲೆಕ್ಕಸಿದೆ ಮನೆಬಿಟ್ಟು ಹೋಗಿ ಇದೀಗ ಯುವತಿಯೊಬ್ಬಳು ಹೆಣವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಪಟ್ಟಣದಲ್ಲಿ ನಡೆದಿದೆ.

ಪವಿತ(18) ಕೊಲೆಯಾದ ಯುವತಿ. ಈಕೆ 14ನೇ ವರ್ಷದಿಂದಲೇ ಎದುರು ಮನೆಯ ಹುಡುಗ ಕಾರ್ತಿಕ್ ನ ಪ್ರೀತಿಯಲ್ಲಿ ಬಿದ್ದಿದ್ದಳು. ಇಬ್ಬರು ಐದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಆದರೆ ಪವಿತ್ರ ಮನೆಯಲ್ಲಿ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತಿಳಿದ ಪವಿತ್ರ ತಾನೂ ಪ್ರೀತಿಸುತ್ತಿದ್ದ ಕಾರ್ತಿಕ್ ನೊಂದಿಗೆ ಡಿಸೆಂಬರ್ 2ರಂದು ಮನೆ ಬಿಟ್ಟು ಪರಾರಿಯಾಗಿದ್ದಳು. ಆದರೆ ಶುಕ್ರವಾರ ಆಂಧ್ರದ ಗಡಿಭಾಗದಲ್ಲಿ ಪವಿತ್ರ ಹೆಣ ಪತ್ತೆಯಾಗಿದೆ ಎಂದು ಬಳ್ಳಾರಿ ಎಸ್‍ಪಿ ಅರುಣ ರಂಗರಾಜನ್ ಹೇಳಿದ್ದಾರೆ.

BLY 1

ಮನೆಬಿಟ್ಟು ಪ್ರೇಮಿಯೊಂದಿಗೆ ಪರಾರಿಯಾಗಿದ್ದ ಯುವತಿ ಪವಿತ್ರಳ ಶವ ಆಂಧ್ರದ ಗಡಿಭಾಗದಲ್ಲಿ ಪತ್ತೆಯಾಗಿದ್ದು, ಪವಿತ್ರಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಇದೀಗ ದೂರು ನೀಡಿದ್ದಾರೆ. ಆದರೆ ಪವಿತ್ರಳೊಂದಿಗೆ ಪರಾರಿಯಾಗಿದ್ದ ಕಾರ್ತಿಕನೇ ಕೊಲೆ ಮಾಡಿದ್ದಾನೋ ಅಥವಾ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅನ್ನೋದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

ಯುವಕ ಕಾರ್ತಿಕ್ ತಾಯಿ ಸಂಡೂರು ತಾಲೂಕ ಪಂಚಾಯತ್ ಸದಸ್ಯೆಯಾಗಿದ್ದು, ಈ ಪ್ರಕರಣದಲ್ಲಿ ಪುತ್ರನನ್ನ ಬಚಾವ್ ಮಾಡಲು ಲಾಭಿ ಮಾಡಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬರುತ್ತಿದೆ. ಹೀಗಾಗಿ ಯುವತಿಯ ಪೋಷಕರು ಹಾಗೂ ಸಂಬಂಧಿಕರು ತನಿಖೆ ಕೈಗೊಂಡು ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸುತ್ತಿದ್ದಾರೆ.

BLY 2

ಪವಿತ್ರಳನ್ನು ತನ್ನ ಪ್ರಿಯತಮ ಕಾರ್ತಿಕ್ ಕೊಲೆ ಮಾಡಿದನೋ ಇಲ್ಲವೋ ಮನೆಯಿಂದ ಪರಾರಿಯಾಗಲು ಸಹಾಯ ಮಾಡಿದ ಮತ್ತೊಬ್ಬ ಯುವಕ ಅತ್ಯಾಚಾರ ಮಾಡಿ ಕೊಲೆ ಮಾಡಿದನೋ ಅನ್ನೋದು ತನಿಖೆಯ ನಂತರ ತಿಳಿಯುತ್ತದೆ. ಆದರೆ ಪ್ರೇಮದ ಬಲೆಗೆ ಬಿದ್ದ ಯುವತಿ ಕೊನೆಗೆ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *