-48 ಕಿ.ಮೀ. ಪ್ರಯಾಣಕ್ಕೆ 2.5 ಲಕ್ಷ ಖರ್ಚು
ಚೆನ್ನೈ: ತಮಿಳುನಾಡು ರಾಜ್ಯದ ದಕ್ಷಿಣ ರೈಲ್ವೆಯ ಸೇಲಂ ವಿಭಾಗದಲ್ಲಿ ಇಂಗ್ಲೆಂಡ್ ದಂಪತಿ ಹನಿಮೂನ್ ಗಾಗಿ ಭಾರತಕ್ಕೆ ಬಂದಿದ್ದು, ನೀಲಗಿರಿ ಮೌಂಟೇನ್ ರೈಲ್ವೇ (ಎನ್‍ಎಂಆರ್)ಯನ್ನು ಪೂರ್ಣ ಬುಕ್ ಮಾಡಿದ್ದಾರೆ. ಎನ್‍ಎಂಆರ್ ನಲ್ಲಿ ಚಾರ್ಟೆಡ್ ಸರ್ವಿಸ್ ಮತ್ತೊಮ್ಮೆ ಪರಿಚಯಿಸಲಾಗಿದ್ದು, ಇಂಗ್ಲೆಂಡ್ ದಂಪತಿ ಮೊದಲ ಪ್ರಯಾಣಿಕರಾಗಿದ್ದಾರೆ.
ಇಂಗ್ಲೆಂಡ್‍ನ ಗ್ರ್ಯಾಹಂ ವಿಲಿಯಂ ಲಿನ್ ಮತ್ತು ಸೈಲ್ವಿಯಾ ಪ್ಲಾಸಿಕ್ ಪೂರ್ಣ ರೈಲ್ವೇ ಬುಕ್ ಮಾಡಿದ ದಂಪತಿ. ತಮಿಳನಾಡಿನ ನೀಲಗಿರಿ ಮೌಂಟೇನ್ ರೈಲ್ವೇ ವಿಭಾಗವನ್ನು ಯುನೆಸ್ಕೋ ಪಟ್ಟಿಯಲ್ಲಿಯೂ ಸೇರಿಸಲಾಗಿದೆ. ಲಿನ್ ದಂಪತಿ ಐಆರ್‍ಸಿಟಿಸಿ ನಲ್ಲಿ 2.5 ಲಕ್ಷ ರೂ. ಖರ್ಚು ಮಾಡಿ ಮೆಟ್ಟಪಾಲಾಯಂ ನಿಂದ ಊಟಿ (48 ಕಿ.ಮೀ)ಯವರೆಗೆ ಮೂರು ಬೋಗಿಗಳುಳ್ಳ ರೈಲನ್ನು ಬುಕ್ ಮಾಡಿದ್ದರು.
Advertisement
143 ಪ್ರಯಾಣಿಕರ ಸಾಮಾರ್ಥ್ಯವುಳ್ಳ ಮೂರು ಬೋಗಿಗಳಳ್ಳು ರೈಲ್ವೇಯನ್ನು ಲಿನ್ ಖಾಸಗಿ ಪ್ರಯಾಣಕ್ಕಾಗಿ ಬುಕ್ ಮಾಡಿಕೊಂಡಿದ್ದರು. ನೀಲಗಿರಿ ಬೆಟ್ಟಗಳ ಮಧ್ಯೆ ಮೀಟರ್ ಗೇಜ್ ನಲ್ಲಿ ಸಾಗುವ ಈ ಮಾರ್ಗದಲ್ಲಿ 13 ಸುರಂಗ ಬರುತ್ತವೆ. ಹಸಿರು ಪರಿಸರದಲ್ಲಿ ಸಾಗುವ ಈ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಮನಸ್ಸಿಗೆ ಒಂದು ರೀತಿಯ ಹೊಸ ಉಲ್ಲಾಸವನ್ನು ನೀಡುತ್ತದೆ. ಶುಕ್ರವಾರ ಬೆಳಗ್ಗೆ 9.10ಕ್ಕೆ ಪ್ರಯಾಣ ಆರಂಭಿಸಿದ ಟ್ರೈನ್ ಮಧ್ಯಾಹ್ನ 2.20ಕ್ಕೆ ಊಟಿಯನ್ನು ತಲುಪಿದೆ.
Advertisement
ಮೆಟ್ಟಪಾಲಯಂನಿಂದ ಕುನ್ನೂರು ಮಾರ್ಗವರೆಗೆ ಕಲ್ಲಿದ್ದಲು ಇಂಜಿನ್ ರೈಲು ಬೋಗಿಗಳನ್ನು ಎಳೆದ್ರೆ, ಕುನ್ನೂರನಿಂದ ಊಟಿಯವರಗೆ ಡೀಸೆಲ್ ಇಂಜಿನ್ ಬಳಕೆ ಮಾಡಲಾಗಿತ್ತು. ಕುನ್ನೂರು ಮತ್ತು ಊಟಿಯಲ್ಲಿ ಲಿನ್ ದಂಪತಿಗೆ ಭವ್ಯ ಸ್ವಾಗತ ಮಾಡಿಕೊಳ್ಳಲಾಗಿತ್ತು.
Advertisement
ನೀಲಗಿರಿ ಮೌಂಟೇನ್ ರೈಲ್ವೇ ಪ್ರಚಾರಕ್ಕಾಗಿ ಈ ವಿಶೇಷ ಪ್ಯಾಕೇಜ್ ನ್ನು ಜಾರಿಗೊಳಿಸಲಾಗಿದೆ. ನೀಲಗಿರಿ ಬೆಟ್ಟಗಳನ್ನು ವಿಶ್ವದಾದ್ಯಂತ ಪರಿಚಯಿಸಲು ಚಾರ್ಟೆಡ್ ಸೇವೆಯನ್ನು ಜಾರಿಗೊಳಿಸಲಾಗಿದೆ. 1997 ರಿಂದ 2000ರಲ್ಲಿ ಮೊದಲ ಬಾರಿಗೆ ಚಾರ್ಟೆಡ್ ಸರ್ವಿಸ್ ಆರಂಭಿಸಲಾಗಿತ್ತು. ನಂತರ 2002ರಿಂದ 200ರ ಅವಧಿಯಲ್ಲಿಯೂ ಚಾರ್ಟೆಡ್ ಸರ್ವಿಸ್ ಲಭ್ಯವಿತ್ತು. ಈಗ ಮತ್ತೊಮ್ಮೆ ಚಾರ್ಟೆಡ್ ಸರ್ವಿಸ್ ಮತ್ತೊಮ್ಮೆ ಪುನಾರಂಭವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ನೀಲಗಿರಿ ಮೌಂಟೇನ್ ರೈಲ್ವೇ ಪ್ರಯಾಣ ಹೇಗಿರುತ್ತೆ? ಈ ಕೆಳಗಿನ ವಿಡಿಯೋ ನೋಡಿ
https://www.youtube.com/watch?time_continue=1477&v=dSdq6oRcjyc