ಬೆಂಗಳೂರು: ಡೇಟಿಂಗ್ ಆಪ್‌ನಲ್ಲಿ (Dating App) ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಸಂತ್ರಸ್ತ ಯುವತಿ ಮಡಿವಾಳ ಪೊಲೀಸ್ (Madiwala) ಠಾಣೆಯಲ್ಲಿ ಯುವಕನ ಮೇಲೆ ದೂರು ದಾಖಲಿಸಿದ್ದು, ಮದುವೆಯಾಗುವುದಾಗಿ ನಂಬಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಡ್ಡಾದಿಡ್ಡಿ ಲಾರಿ ಚಾಲನೆ, ವಾಹನಗಳಿಗೆ ಡಿಕ್ಕಿ – ಚಾಲಕನ ಬರ್ಬರ ಹತ್ಯೆ
ಕಳೆದ ಮಾರ್ಚ್ ತಿಂಗಳಲ್ಲಿ ಸಂತ್ರಸ್ತ ಯುವತಿಗೆ ಡೇಟಿಂಗ್ ಆಪ್‌ನಲ್ಲಿ ನಿಹಾಲ್ ಹುಸೇನ್‌ನ ಪರಿಚಯವಾಗಿತ್ತು. ಬಳಿಕ ಅದೇ ತಿಂಗಳಲ್ಲಿ ನಿಹಾಲ್ ಯುವತಿಯನ್ನು ಪಾರ್ಟಿಗೆಂದು ಹೋಟೆಲ್‌ಗೆ ಕರೆಯಿಸಿದ್ದ. ಅಲ್ಲಿ ಆಕೆಗೆ ಕೊಟ್ಟ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಅತ್ಯಾಚಾರ ಎಸಗಿದ್ದ. ಬಳಿಕ ಆಕೆ ಗರ್ಭಿಣಿಯಾಗಿದ್ದು, ಮೇ ತಿಂಗಳಲ್ಲಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವರ್ಷ 2023ರಲ್ಲಿ ಇದೇ ಯುವತಿ ಮತ್ತೊಬ್ಬ ಯುವಕನ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿಯೇ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದು, ಮತ್ತಷ್ಟೂ ಕೂತುಹಲಕಾರಿ ವಿಷಯಗಳು ಬೆಳಕಿಗೆ ಬರುತ್ತಿವೆ.ಇದನ್ನೂ ಓದಿ: Odisha| ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ 20 ಲಕ್ಷ ರೂ. ಸೀಜ್