ಮಡಿಕೇರಿ: ಕಳೆದ ಹತ್ತು ದಿನಗಳ ಹಿಂದೆ ಹುಲಿ ದಾಳಿಯಿಂದ ಯುವಕನೋರ್ವ ಬಲಿಯಾಗಿದ್ದ. ಪ್ರೀತಿಯಿಂದ ಸಾಕಿದ ಶ್ವಾನದ ಪ್ರೀತಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇಂದು ಆಥವಾ ನಾಳೆ ತನ್ನ ಸಾಕಿದ ಮಾಲೀಕ ಬರುತ್ತಾನೆ ಎಂದು ಶ್ವಾನ ನಿರೀಕ್ಷೆಯಲ್ಲಿ ಮಾಲೀಕನನ್ನು ಕಾಯುತ್ತಿದೆ.
ಹೌದು, ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲ್ಲೂಕಿನ ಅತ್ತೂರು ಗ್ರಾಮದ ಮನೆಯೊಂದರಲ್ಲಿ ಶೋಕ ಮಡುಗಟ್ಟಿದೆ. ಮಾಲೀಕನಿಗಾಗಿ ಶ್ವಾನ ಕಾದು ಕುಳಿತಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತ ಮಾಡೋಕೆ ಯಾರಪ್ಪನ ಕೈಯಲ್ಲೂ ಆಗಲ್ಲ: ನಲಪಾಡ್
ವಿಶ್ವಾಸ, ನಂಬಿಕೆಗೆ ಹೆಸರುವಾಸಿಯಾದ ಈ ನಾಯಿಯ ಪ್ರೀತಿಗೆ ಸರಿಸಾಟಿಯೇ ಇಲ್ಲ. ಹುಲಿ ದಾಳಿಯಿಂದ ಮೃತಪಟ್ಟ ಒಡೆಯನಿಗಾಗಿ ಕಳೆದ ಹತ್ತು ದಿನಗಳಿಂದ ಹುಡುಕಾಡುತ್ತಿರುವ ಈ ಶ್ವಾನದ ಹೆಸರು ಟಾಮಿ ಅಂತ. ಹತ್ತು ದಿನಗಳಿಂದ ಮಾಲೀಕನಿಗಾಗಿ ನಿರಂತರ ಹುಡುಕಾಟದಲ್ಲಿರುವ ಟಾಮಿ ಮನೆ ಒಳಗೆ, ಮನೆಯ ಹಿಂಬದಿಯಲ್ಲಿ ಮಾಲೀಕ ಇರಬಹುದು ಎಂದು ಓಡಾಡಿ ಹುಡುಕುತ್ತಿದೆ. ಇದನ್ನೂ ಓದಿ: ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ
ಮೃತ ಗಣೇಶನ ಮನೆಯವರು ನಾಯಿಯ ತೊಳಲಾಟ ನೋಡಿ ಮರುಗುತ್ತಿದ್ದಾರೆ. ಎರಡು ವರ್ಷಗಳಿಂದ ಟಾಮಿಯನ್ನು ಮುದ್ದಿನಿಂದ ಸಾಕಿದ್ದ ಗಣೇಶ್ ತಾನು ಎಲ್ಲೇ ಹೋದರು ಜೊತೆಯೇ ಶ್ವಾನವನ್ನು ಕರೆದೊಯ್ಯುತ್ತಿದ್ದ. ಅದನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ. ಆದರೆ ಇದೀಗಾ ಗಣೇಶ್ ಇಲ್ಲದೇ ಇರುವುದರಿಂದ ಈ ಟಾಮಿ ಒಡೆಯನಿಲ್ಲದೆ ಪರಿತಪಿಸುತ್ತಿದೆ. ಇದರಿಂದ ಮನೆಯ ಕುಟುಂಬದ ಸದಸ್ಯರು ಟಾಮಿಯನ್ನು ನೋಡಿ ಮತ್ತಷ್ಟು ದುಃಖ ಪಡುತ್ತಿದ್ದಾರೆ.