ಪ್ರೇಯಸಿ ಜೊತೆ ಸೇರಿಕೊಂಡು ತಾಯಿಯನ್ನೇ ಕೊಂದ ಮಗ

Public TV
2 Min Read
mother murder

– ಪ್ರೀತಿ ವಿರೋಧಿಸಿದ್ದಕ್ಕೆ ಹೆತ್ತ ತಾಯಿಯ ಕೊಲೆ
– ಸುಳ್ಳು ಕತೆ ಹೇಳಿದ ಮಗ, ಯುವತಿ ಅರೆಸ್ಟ್

ಲಕ್ನೋ: ಮಗನೊಬ್ಬ ಪ್ರೇಯಸಿ ಜೊತೆ ಸೇರಿಕೊಂಡು ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಲಕ್ಷ್ಮಿ ದೇವಿ(55) ಕೊಲೆಯಾದ ತಾಯಿ. ಶಿವಂ ಮಾರ್ಚ್ 6ರಂದು ತನ್ನ ತಾಯಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಬಳಿ ಸುಳ್ಳು ಕತೆ ಹೇಳಿದ್ದನು. ಪೊಲೀಸರು ಸ್ಥಳಕ್ಕೆ ಬಂದು ಮಹಿಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ವರದಿ ಬಂದಾಗ ಇದು ಕೊಲೆ ಎಂಬುದು ಪೊಲೀಸರಿಗೆ ತಿಳಿಯಿತು. ಬಳಿಕ ಶಿವಂ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.

the flip side of love

ನಡೆದಿದ್ದೇನು?
ಶಿವಂ ತನ್ನ ಪಕ್ಕದ ಮನೆಯಲ್ಲಿರುವ ಯುವತಿಯನ್ನು ಪ್ರೀತಿಸುತ್ತಿದ್ದನು. ಇವರಿಬ್ಬರ ಪ್ರೀತಿಯನ್ನು ಲಕ್ಷ್ಮಿ ದೇವಿ ತೀವ್ರವಾಗಿ ವಿರೋಧಿಸಿದ್ದರು. ಯುವತಿ ಜೊತೆ ಓಡಿ ಹೋಗಿ ಬೇರೆ ಕಡೆ ಜೀವನ ನಡೆಸಲು ಶಿವಂ ನಿರ್ಧರಿಸಿದ್ದನು. ಅಲ್ಲದೆ ತನ್ನ ತಾಯಿಯ ಬಳಿ ಹಣ ಕೂಡ ಕೇಳಿದ್ದನು. ಹಣ ಕೊಟ್ಟರೆ ಶಿವಂ ಯುವತಿ ಜೊತೆ ಓಡಿ ಹೋಗುತ್ತಾನೆ ಎಂದು ಮಹಿಳೆ ಆತನಿಗೆ ಹಣ ಕೊಡಲು ನಿರಾಕರಿಸಿದ್ದಳು.

love hand wedding valentine day together holding hand 38810 3580

ಘಟನೆ ನಡೆದ ದಿನ ಶಿವಂ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ತೆಗೆದುಕೊಳ್ಳುತ್ತಿದ್ದನು. ಇದನ್ನು ನೋಡಿದ ತಾಯಿ ಆತನಿಗೆ ಬೈದು ಹಣ ಹಾಗೂ ಚಿನ್ನವನ್ನು ವಾಪಸ್ ಪಡೆದರು. ಇದರಿಂದ ಕೋಪಗೊಂಡ ಶಿವಂ ತನ್ನ ತಾಯಿಯನ್ನು ಜೋರಾಗಿ ತಳ್ಳಿದ್ದನು. ಪರಿಣಾಮ ಲಕ್ಷ್ಮಿ ದೇವಿ ಗಾಯಗೊಂಡಿದ್ದರು. ಬಳಿಕ ಶಿವಂ ತನ್ನ ಪ್ರೇಯಸಿಯನ್ನು ಕರೆದಿದ್ದನು. ಇಬ್ಬರು ದಿಂಬಿನಿಂದ ಲಕ್ಷ್ಮಿ ದೇವಿಯ ಉಸಿರುಗಟ್ಟಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಶಿವಂ ಹಾಗೂ ಯುವತಿ ಸ್ಥಳದಿಂದ ಪರಾರಿಯಾಗಿದ್ದರು.

Police Jeep 1 1

ಈ ಬಗ್ಗೆ ಎಸ್‍ಪಿ ಸಿ.ಟಿ ರೋಹನ್ ಪ್ರತಿಕ್ರಿಯಿಸಿ, ಲಕ್ಷ್ಮಿ ದೇವಿ ಒಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಪತಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಘಟನೆ ನಡೆದ ದಿನ ಶಿವಂ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿ ಸ್ವತಃ ತಾನು ಓಡಿ ಹೋಗಿದ್ದನು. ರಾತ್ರಿ ಶಿವಂ ಮನೆಗೆ ವಾಪಸ್ ಬಂದ ನಂತರ ಪೊಲೀಸ್ ಠಾಣೆಗೆ ಬಂದು ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳು ಕತೆ ಹೇಳಿದ್ದನು. ನಾವು ಮಹಿಳೆಯ ಮೃತದೇಹವನ್ನು ವಶಕ್ಕೆ ಪಡೆದು ತನಿಖೆ ಶುರು ಮಾಡಿದ್ದೇವು. ಈ ವೇಳೆ ಶಿವಂ ಮೇಲೆ ಅನುಮಾನ ಬಂದಿದ್ದು, ಆತನನ್ನು ವಶಕ್ಕೆ ಪಡೆದುಕೊಂಡಿದ್ದೇವು. ತೀವ್ರವಾಗಿ ವಿಚಾರಣೆ ನಡೆಸಿದಾಗ ಶಿವಂ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು. ಬಳಿಕ ಶಿವಂ ಹಾಗೂ ಆತನ ಪ್ರೇಯಸಿಯನ್ನು ಬಂಧಿಸಿದ್ದೇವು ಎಂದು ತಿಳಿಸಿದರು.

uttar pradesh police jpg 1575793938 e1577603453458

Share This Article