– ಪಾಂಡಿಚೇರಿ ಬಿಜೆಪಿ ಯುವ ಮುಖಂಡ ಅರೆಸ್ಟ್
ಹುಬ್ಬಳ್ಳಿ: ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡದಿದ್ದಕ್ಕೆ ಯುವತಿ ಜೊತೆಗಿನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ ಯುವ ಮುಖಂಡನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪಾಂಡಿಚೇರಿಯ ಬಿಜೆಪಿಯ ಯುವ ಮುಖಂಡ ರಾಕಿ ಬಂಧಿತ ಆರೋಪಿ. ರಾಕಿ ಸಂಬಂಧಿಯೊಬ್ಬರ ಪುತ್ರಿಯನ್ನ ಪ್ರೀತಿಸುತ್ತಿದ್ದನು. ಒಂದು ವೇಳೆ ಯುವತಿಯೊಂದಿಗೆ ಮದುವೆ ಮಾಡಿಕೊಡದಿದ್ದರೇ ಸೋಶಿಯಲ್ ಮಿಡಿಯಾದಲ್ಲಿ ಖಾಸಗಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಯುವತಿಯ ಕುಟುಂಬವರಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದನು. ಈ ಸಂಬಂಧ ಯುವತಿಯ ತಂದೆ ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Advertisement
Advertisement
ಯುವತಿಯ ತಂದೆಯೂ ಸಹ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದುಳಿದಿದ್ದಾರೆ. ಬಹುತೇಕ ಈ ಕುಟುಂಬ ಪಾಂಡಿಚೇರಿಯಲ್ಲಿಯೇ ವಾಸವಾಗಿರುತ್ತದೆ. ಆದರೆ ಈ ಘಟನೆ ನಂತರ ಇಡೀ ಕುಟುಂಬ ಹುಬ್ಬಳ್ಳಿಯ ಮಂಟೂರ ರಸ್ತೆಯ ಮನೆಯೊಂದರಲ್ಲಿ ಉಳಿದುಕೊಂಡಿದ್ದಾರೆ.
Advertisement
ತಾಯಿ ಕಡೆಯಿಂದ ದೂರದ ಸಂಬಂಧವೆಂಬ ಕಾರಣಕ್ಕೆ ರಾಕಿ ಯುವತಿ ಜೊತೆ ಹೆಚ್ಚು ಒಡನಾಟ ಹೊಂದಿದ್ದನು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಸರಸ ಸಲ್ಲಾಪಗಳಲ್ಲಿ ತೊಡಗಿದ್ದಾಗ ಅದನ್ನು ರಾಕಿ ವಿಡಿಯೋ ಮಾಡಿಕೊಂಡಿದ್ದಾನೆ. ಯುವತಿಯನ್ನು ಮದುವೆ ಮಾಡಿಕೊಡುವಂತೆ ಅನೇಕ ಬಾರಿ ಒತ್ತಾಯಿಸಿದ್ದಾನೆ. ವಿವಾಹಕ್ಕೆ ಯುವತಿ ಮನೆಯವರು ನಿರಾಕರಿಸಿದ್ದಾರೆ. ರಾಕಿ ಮತ್ತು ಯುವತಿ ಅಣ್ಣ-ತಂಗಿ ಸಂಬಂಧವಾಗಿತ್ತು. ಹಾಗಾಗಿ ಯುವತಿ ಕುಟುಂಬಸ್ಥರು ಈ ಸಂಬಂಧವನ್ನು ನಿರಾಕರಿಸಿದ್ದರು.
Advertisement
ಮದುವೆಯಂತಾದರೆ ಆಕೆಯನ್ನೇ ವಿವಾಹವಾಗುವುದಾಗಿ ಪಟ್ಟು ಹಿಡಿದಿದ್ದನು. ಒಂದು ವೇಳೆ ಈ ಮದುವೆಗೆ ಒಪ್ಪದಿದ್ದರೆ, ಈ ಹಿಂದೆ ಮಾಡಿಕೊಂಡಿದ್ದ ಯುವತಿಯ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಲಾರಂಭಿಸಿದ್ದಾನೆ. ಕೆಲ ವಿಡಿಯೋ ಮತ್ತು ಫೋಟೋಗಳನ್ನು ಯುವತಿಯ ತಂದೆ ಮೊಬೈಲ್‍ಗೆ ಹರಿಬಿಟ್ಟಿದ್ದಾನೆ. ಅಲ್ಲದೇ ಹಲವು ವಾಟ್ಸಪ್ ಗ್ರೂಪ್‍ನಲ್ಲಿಯೂ ವಿಡಿಯೋ ಫೋಟೋಗಳನ್ನ ಹರಿಬಿಟ್ಟಿದ್ದಾನೆ. ಕೆಲ ಅಶ್ಲೀಲ ಫೋಟೋಗಳನ್ನು ಫೇಸ್‍ಬುಕ್ ಖಾತೆಗೂ ಹಾಕಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದರಿಂದ ತೀವ್ರವಾಗಿ ನೊಂದ ಕುಟುಂಬಸ್ಥರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಆತನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಯುವತಿಯ ತಂದೆ ಮತ್ತು ಕುಟುಂಬಸ್ಥರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡನನ್ನ ಪೊಲೀಸರು ಬಂಧಿಸಿದ್ದಾರೆ.