ಹಾಸನ: ಜಿಲ್ಲೆಯ ಮಹಿಳಾ ರಕ್ಷಣಾ ಕೇಂದ್ರದಲ್ಲಿದ್ದ ಯುವತಿ ಶನಿವಾರ ಬೆಳಗ್ಗೆ ತಪ್ಪಿಸಿಕೊಂಡು ತಾನು ಪ್ರೀತಿಸುತ್ತಿದ್ದ ಹುಡುಗನ ಜೊತೆ ಮದುವೆಯಾಗಿದ್ದಾಳೆ. ಆದರೆ ಈಗ ರಕ್ಷಣೆ ಕೊಡುವಂತೆ ಯುವತಿ ಮನವಿ ಮಾಡಿಕೊಂಡಿದ್ದಾಳೆ.
ಆಲೂರು ತಾಲೂಕು ಕರಡೀಬೈಲು ಗ್ರಾಮದಲ್ಲಿ 2017ರ ನವೆಂಬರ್ 13 ರಂದು ಮಹಮದ್ ಅಲಿ ಪುತ್ರಿ ರಂಸೀನಾ ರಾತ್ರೋರಾತ್ರಿ ನಾಪತ್ತೆಯಾಗಿದ್ದಳು. ಈ ಸಂಬಂಧ ರಘು ಮಗಳನ್ನು ಅಪಹರಿಸಿದ್ದಾನೆ ಅಂತ ರಂಸೀನಾ ಪೋಷಕರು ಪೊಲೀಸರಿಗೆ ದೂರು ನೀಡಿದಲ್ಲದೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಪತ್ತೆಯಾದ ರಂಸೀನಾ ಹಾಸನದ ಬಾಲ ಭವನದಲ್ಲಿ ಆಶ್ರಯ ಪಡೆದಿದ್ದಳು.
Advertisement
Advertisement
ಸೆಪ್ಟೆಂಬರ್ 25 ರಂದು ಬಾಲಭವನದ ಬಳಿ ಬಂದ ರಘು ತನ್ನೊಡನೆ ರಂಸೀನಾಳನ್ನು ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದನು. ಆಗ ಯುವತಿ ಪೋಷಕರು ಹಾಗೂ ರಘು ನಡುವೆ ವಾಗ್ವಾದ ತಾರಕಕ್ಕೇರಿತ್ತು. ಇಷ್ಟೆಲ್ಲಾ ರಂಪಾಟದ ಬಳಿಕ ರಂಸೀನಾ ಪೋಷಕರು ಮಗಳನ್ನು ಹಾಸನದ ಕೆ.ಆರ್.ಪುರಂನ ಶ್ವೇತಾ ಉಜ್ವಲ ಕೇಂದ್ರದ ಆಶ್ರಯದಲ್ಲಿರಿಸಿದ್ದರು. ಶನಿವಾರ ಬೆಳಗ್ಗೆ ಅಲ್ಲಿಂದ ತಪ್ಪಿಸಿಕೊಂಡು ರಂಸೀನಾ ರಘುವಿನೊಂದಿಗೆ ಅರಸೀಕೆರೆ ರಸ್ತೆಯ ದೇವಾಲಯದಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ವಿವಾಹವಾಗಿದ್ದರು.
Advertisement
ನಾವಿಬ್ಬರೂ 2 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ನಮ್ಮ ಪ್ರೀತಿಗೆ ಮನೆಯವರ ವಿರೋಧವಿತ್ತು. ನನಗೆ 18 ವರ್ಷವಾಗಿದೆ ಹಾಗಾಗಿ ರಘು ಜೊತೆ ಮದುವೆಯಾಗಿದ್ದೇನೆ. ಮುಂದೆ ನಾವು ಚೆನ್ನಾಗಿ ಬಾಳುತ್ತೇವೆ. ಆದರೆ ನಮಗೆ ಜೀವ ಭಯವಿದ್ದು, ನಮಗೆ ಕಾನೂನು ರಕ್ಷಣೆ ಕೊಡಬೇಕು ಅಂತ ರಂಸೀನಾ ಮನವಿ ಮಾಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv