-ಅವಳಿಲ್ಲದೇ ನಾ ಬದುಕಲ್ಲ ಪತಿಯ ಗೋಳಾಟ
ಬೆಂಗಳೂರು: ನಾಲ್ಕು ವರ್ಷ ಪ್ರೀತಿ ಮಾಡಿ ಮನೆಯವರ ವಿರೋಧದ ನಡುವೆಯೂ ಮದುವೆಯಾದರು. ಆದರೆ ಮದುವೆಯ ಮದರಂಗಿ ಮಾಸುವ ಮುನ್ನವೇ ಈತನು ನನ್ನ ಗಂಡನೇ ಅಲ್ಲ ಎಂದು ಹುಡುಗಿ ಪೊಲೀಸ್ ಮೆಟ್ಟಿಲೇರಿದ್ದಾಳೆ.
ನಗರದ ಮಾಚೋಹಳ್ಳಿ ನಿವಾಸಿ ರಾಘವೇಂದ್ರ ಮೋಸ ಹೋದ ಹುಡುಗ. ಈತ ನಾಲ್ಕು ವರ್ಷದ ಹಿಂದೆ ರಾಮನಗರ ಮೂಲದ ಎಂಜಿನಿಯರ್ ವಿದ್ಯಾರ್ಥಿನಿಯನ್ನು ಪ್ರೀತಿ ಮಾಡುತ್ತಿದ್ದರು. ಆಕೆಯು ರಾಘವೇಂದ್ರನನ್ನು ಪ್ರೀತಿ ಮಾಡುತ್ತಿದ್ದಳು. ಇವರಿಬ್ಬರ ಪ್ರೀತಿ ವಿಚಾರ ರಾಘವೇಂದ್ರ ಮನೆಯವರಿಗೆ ತಿಳಿದಿದೆ. ಬಳಿಕ ಪೋಷಕರು ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಹುಡುಗಿ ನಮ್ಮ ಮದುವೆಗೆ ಯಾರು ಒಪ್ಪುವುದಿಲ್ಲ ಮದುವೆಯಾಗೋಣ ಎಂದು ಒತ್ತಾಯಿಸಿ ನಾಲ್ಕು ತಿಂಗಳ ಹಿಂದೆ ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದಾರೆ.
ರಾಘವೇಂದ್ರ ಮದ್ವೆಯಾದ ಮೇಲೆ ಹುಡುಗಿಯ ಪೋಷಕರು ಮನೆಯವರು ರಾಘು ಮನೆಗೆ ಬಂದಿದ್ದಾರೆ. ಆಗ ನಾವು ಬೇರೆ ಹುಡುಗನ ಜೊತೆ ಮದುವೆ ಮಾಡಿಸ್ತೀವಿ ಬಾ ಎಂದು ಪೋಷಕರು ಕರೆದಿದ್ದಾರೆ. ಈ ವೇಳೆ ಹುಡುಗಿ ನಾನು ಗಂಡನನ್ನು ಬಿಟ್ಟು ಬರಲ್ಲ ಅಂತಾ ರಂಪಾಟ ಮಾಡಿದ್ದಾಳೆ. ಆಗ ಹುಡುಗಿಯ ತಂದೆ ನಾವೇ ಮುಂದೆ ನಿಂತು ಆರತಕ್ಷತೆ ಮಾಡುತ್ತೇವೆ. ಇಲ್ಲ ಅಂದರೆ ನಮ್ಮ ಮರ್ಯಾದೆ ಹೋಗುತ್ತದೆ ಎಂದು ತಿಳಿಸಿದ್ದಾರೆ.
ಹುಡುಗಿಯ ಪೋಷಕರ ಮಾತು ಕೇಳಿದ ರಾಘು ತನ್ನ ಹೆಂಡತಿಯನ್ನು ಖುಷಿಯಿಂದ ತವರು ಮನೆಗೆ ಕಳಿಸಿದ್ದಾನೆ. ಮರುದಿನ ನಾವು ಆರತಕ್ಷತೆಗೆ ಬರುತ್ತೇವೆ ನೀವು ತಯಾರು ಮಾಡಿಕೊಳ್ಳಿ ಎಂದು ಹೇಳಿ ಹೊರಟಿದ್ದಾರೆ. ನಂತರ ರಾಘು ಭರ್ಜರಿ ಊಟ ರೆಡಿ ಮಾಡಿಕೊಂಡು ಆರತಕ್ಷತೆಗೆ ಕಾಯುತ್ತಿದ್ದರು. ಎಷ್ಟೆ ಕಾದರು ಅವರ ಮನೆಯವರು ಬರಲೇ ಇಲ್ಲ. ಕರೆ ಮಾಡಿದರೆ ಫೋನ್ ಆಫ್ ಆಗಿತ್ತು. ಅಷ್ಟರಲ್ಲಿ ಪೊಲೀಸರ ಕರೆ ಬಂದಿದ್ದು, ಅವರು ನಿನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧವೇ ಪೋಲಿಸರಿಗೆ ಇವನು ನನ್ನ ಗಂಡನೇ ಅಲ್ಲ ಅಂತ ಯುವತಿ ದೂರು ಕೊಟ್ಟಿದ್ದಾಳೆ. ಆದರೆ ಇದೆಲ್ಲವನ್ನು ಆಕೆ ಮನೆಯವರ ಒತ್ತಾಯಕ್ಕೆ ಕೊಟ್ಟಿರುವುದು ಆಕೆಯ ಮನೆಯವರು ಪ್ರತಿದಿನ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಹೆಂಡತಿಯನ್ನ ಮಾತಾನಾಡಿಸೋಣ ಅಂತ ಊರಿಗೆ ಹೋದರೆ ಅಲ್ಲೆ ಬೆದರಿಕೆ ಹಾಕಿ ವಾಪಸ್ ಕಳಿಸಿದ್ದಾರೆ. ಅವಳಿಲ್ಲದೇ ನಾನು ಬದುಕಲ್ಲ ಎಂದು ರಾಘವೇಂದ್ರ ಆಳಲು ತೋಡಿಕೊಂಡಿದ್ದಾರೆ.
ಸದ್ಯಕ್ಕೆ ಪತ್ನಿಗಾಗಿ ಫ್ಯಾಮಿಲಿ ಕೋರ್ಟ್ ಮೊರೆ ಹೋಗಿದ್ದಾರೆ. ಆಕೆ ಸಿಗದೆ ಇದ್ದರೆ ನಾನು ಜೀವ ಕಳೆದುಕೊಳ್ಳುತ್ತೇನೆ ಅಂತ ರಾಘವೇಂದ್ರ ಕಣ್ಣೀರಿಡುತ್ತಿದ್ದಾರೆ. ಆದರೆ ಅವರ ಪ್ರೀತಿಯ ಮದುವೆಗೆ ಪೋಷಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv