ಬೆಳಗಾವಿ: ಸಿಕ್ಕ-ಸಿಕ್ಕ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಸಾಕು ಮೆಸೇಜ್ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿ, ಪ್ರೇಮದ ನಾಟಕವಾಡುತ್ತಿದ್ದ ಪತಿ ಬಣ್ಣವನ್ನು ಪತ್ನಿಯೇ ಈಗ ಬಯಲು ಮಾಡಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಧರೆಪ್ಪ ಕಂಕಣವಾಡಿ ಪತ್ನಿಗೆ ಮೋಸ ಮಾಡಿದ ವ್ಯಕ್ತಿ. ಈತನಿಗೆ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಸಾಕು ಚಾಟಿಂಗ್ ಆರಂಭಿಸುತ್ತಿದ್ದ. ಬಳಿಕ ಪರಿಚಯ ಮುಂದುವರಿಸಿ ಪ್ರೀತಿ ಪ್ರೇಮದ ನಾಟಕವಾಡಿ ಮೊಬೈಲಿನಲ್ಲಿ ರೋಮ್ಯಾಂಟಿಕ್ ಆಗಿ ಫೋಟೋ ತೆಗೆದುಕೊಂಡು ಪೆನ್ ಡ್ರೈವ್ ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದನು. ಹೀಗೆ ಕದ್ದು ಮುಚ್ಚಿ ನಡೆಯುತ್ತಿದ್ದ ಈತನ ಕಳ್ಳಾಟ ಕೊನೆಗೂ ಹೆಂಡತಿ ಮುಂದೆ ಬಯಲಾಗಿದೆ.
Advertisement
Advertisement
ಫೋಟೋ ನೋಡಿ ಶಾಕ್:
ಗಂಡನ ಮೊಬೈಲ್ ಹಾಗೂ ಪೆನ್‍ಡ್ರೈವ್ ನೋಡಿದಾಗ ಬೇರೆ ಹುಡುಗಿಯರೊಂದಿಗೆ ಇರುವ ಫೋಟೊಗಳು, ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಸ್ಕ್ರೀನ್ ಶಾಟ್ ನೋಡಿ ಪತ್ನಿ ಶಾಕ್ ಆಗಿದ್ದಾರೆ. ಫೋಟೋಗಳು, ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಸ್ಕ್ರೀನ್ ಶಾಟ್ಸ್ ಸಂಗ್ರಹಿಸಿಟ್ಟು ಹುಡುಗಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಾ ಎಂಬ ಅನುಮಾನ ಪತ್ನಿಗೆ ಮೂಡಿದೆ.
Advertisement
ಪ್ರೀತಿಸಿ ಮದ್ವೆಯಾಗಿದ್ದ:
ಧರೆಪ್ಪ ಕಂಕಣವಾಡಿ ಇಂದಿರಾಳನ್ನ 2011ರಲ್ಲಿ ಪ್ರೇಮ ವಿವಾಹವಾಗಿದ್ದನು. ಇಂದಿರಾ ಅವರಿಗೂ ಮೆಸೇಜ್ ಮಾಡಿ ಪರಿಚಯ ಮಾಡಿಕೊಂಡು, ಲವ್ ಮಾಡಿ ಮದುವೆ ಮಾಡಿಕೊಂಡಿದ್ದನು. ಇಂದಿರಾ ಮನೆಯವರ ವಿರೋಧದ ನಡುವೆಯೂ ತಮ್ಮ ಮನೆಯವರನ್ನ ಒಪ್ಪಿಸಿ ವಿವಾಹವಾಗಿದ್ದರು. ಆದರೆ ಪತ್ನಿಗೆ ಗೊತ್ತಾಗದಂತೆ ಕದ್ದು ಮುಚ್ಚಿ ಕಳ್ಳಾಟ ಶುರುವಿಟ್ಟುಕೊಂಡಿದ್ದನು. ಈ ಕಳ್ಳಾಟದ ವಿಷಯ ಮದುವೆಯಾಗಿ ಆರು ವರ್ಷಕ್ಕೆ ಬಯಲಾಗಿದೆ.
Advertisement
ಹಣ ನೀಡಿದ್ದ ಪತ್ನಿ:
ಕೆಲಸವೇ ಇಲ್ಲದೇ ಅಲೆಯುತ್ತಿದ್ದ ಧರೆಪ್ಪನಿಗೆ ಧಾರವಾಡದ ಜಿಲ್ಲಾಸ್ಪತ್ರೆಗೆ ಲ್ಯಾಬ್ ಟೆಕ್ನಿಶಿಯನ್ ಕೋರ್ಸ್ ಗೆ ನಾನು ಕಳುಹಿಸಿದ್ದೆ. ಇತನ ಸಂಪೂರ್ಣ ಖರ್ಚು ವೆಚ್ಚಕ್ಕೆ ಎಂದು ತಿಂಗಳಿಗೆ 10 ಸಾವಿರ ಹಣ ನೀಡುತ್ತಿದ್ದೆ. ಆದರೆ ನಾನು ಕಳುಹಿಸಿದ್ದ ಹಣದಲ್ಲಿ ಪರಸ್ತ್ರೀಯರೊಂದಿಗೆ ಮಜಾ ಮಾಡುತ್ತಿದ್ದನು. ಹುಡುಗಿಯರೊಂದಿಗೆ ಎಲ್ಲೆಂದರಲ್ಲಿ ಸುತ್ತಾಡಿ ಅವರೊಟ್ಟಿಗೆ ತೀರಾ ಖಾಸಗಿಯಾಗಿ ಫೋಟೋಗಳನ್ನ ತೆಗೆದಿಟ್ಟುಕೊಂಡಿದ್ದಾನೆ. ಇವುಗಳನ್ನ ನೋಡಿ ನನಗೆ ಶಾಕ್ ಆಯಿತು. ಅಂದಿನಿಂದ ನಾನು ಆತನಿಗೆ ಹಣ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ನನ್ನ ಜೊತೆಗೆ ಮೇಲಿಂದ ಮೇಲೆ ಜಗಳವಾಡಿಕೊಂಡು, ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಇಂದಿರಾ ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ.
ಇಂದಿರಾ ಕೊನೆಗೆ ಬೇಸತ್ತು ನವೆಂಬರ್ 26ರಂದು ಪತಿ ಧರೆಪ್ಪನ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ್ದಕ್ಕೆ ಕೋಪಗೊಂಡ ಧರೆಪ್ಪ ಹಾಗೂ ಆತನ ಕುಟುಂಬಸ್ಥರು ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ನಿ ಇಂದಿರಾ ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv