ಧಾರವಾಡ: ಲವ್ ಜಿಹಾದ್ (Love Jihad) ಹೆಚ್ಚಾಗುತ್ತಿದೆ. ನಿಮ್ಮ ಮಕ್ಕಳನ್ನು ನೀವು ರಕ್ಷಿಸಿಕೊಳ್ಳಿ ಎಂದು ಮೃತ ನೇಹಾ ತಂದೆ (Neha Hiremath), ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ (Niranjan Hiremath) ಮನವಿ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಅನೇಕ ಕಡೆ ನೋಡಿದಾಗ ಕ್ರೂರತನ ಜಾಸ್ತಿ ಆಗುತ್ತಿದೆ. ಈ ರೀತಿಯ ಮನಸ್ಥಿತಿ ಹೆಚ್ಚಾಗುತ್ತಿದೆ ಯಾಕೆ? ಮತ್ತೊಬ್ಬ ಬಡ ಪೋಷಕರ ಹೆಣ್ಣು ಮಕ್ಕಳು ಈ ರೀತಿ ಆಗಬಾರದಲ್ಲ. ಲವ್ ಜಿಹಾದ್ ಬಹಳ ವಿಸ್ತಾರವಾಗಿ ಹೋಗುತ್ತಿದೆ ಅಂತ ನನಗೂ ಅನಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿರೋದು: ಸಿಎಂ
ನನಗೆ ಒಬ್ಬಳೇ ಮಗಳು. 25 ವರ್ಷದಿಂದ ನಾನು ಒಂದು ದಿವಸ ಕಣ್ಣಿರು ಹಾಕಿಲ್ಲ. ಇವತ್ತು ನನ್ನ ಮನೆಗೆ ಈ ರೀತಿ ಆಗಿದೆ. ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ಹೇಳುತ್ತಿದ್ದೇನೆ. ತಮ್ಮ ಮಗಳು ಏನು ಮಾಡುತ್ತಾಳೆ? ಅವಳ ಹಿಂದೆ ಯಾರಿದ್ದಾರೆ ಎಂಬುದನ್ನು ನೀವುಕೂಡ ಗಮನ ಹರಿಸಬೇಕು. ನನ್ನ ಮಗಳಿಗೆ ಆದಂತೆ ಇನ್ನೊಬ್ಬರ ಮಗಳಿಗೆ ಈ ರೀತಿ ಆಗಬಾರದು ಎಂದರು. ಇದನ್ನೂ ಓದಿ: ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.. ಲವ್ ಜಿಹಾದ್ ನನಗೆ ಕಾಣುತ್ತಿಲ್ಲ: ಹುಬ್ಬಳ್ಳಿ ಕೊಲೆ ಬಗ್ಗೆ ಪರಮೇಶ್ವರ್ ಹೇಳಿಕೆ
ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಜೊತೆ ಕೇಳಿಕೊಳ್ಳುತ್ತೇನೆ. ಹೆಣ್ಣು ಮಕ್ಕಳು ಕಲಿಯಬೇಕು. ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಇದ್ದಾರೆ. ಈ ರೀತಿ ಆದರೆ ಕಾಲೇಜಿಗೆ ಹೋಗಲು ಹೇಗೆ ಧೈರ್ಯ ಬರುತ್ತೆ ಎಂದು ಪ್ರಶ್ನಿಸಿದರು.