ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ, ಲವ್ ಅಟ್ ಬ್ಯಾಕ್ ಸೈಟ್: ಆರ್.ಅಶೋಕ್

Public TV
2 Min Read
R Ashoka

– ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ ಎಂದ ಮಾಜಿ ಸಚಿವ

ಚಿಕ್ಕಮಗಳೂರು: ಲವ್ ಜಿಹಾದ್ (Love Jihad) ಅಂದ್ರೆ, ಪ್ರೀತಿಸಿ ಅವರಿಗೆ ಇಷ್ಟವಾದವರನ್ನ ಮದುವೆ ಆಗ್ತಾರೆ ಎಂಬ ಲವ್ ಅಟ್ ಫಸ್ಟ್ ಸೈಟ್ ಅಲ್ಲ. ನಾನು ಹಾಗೇ ತಿಳಿದುಕೊಂಡಿದ್ದೆ. ಆದ್ರೆ, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಮತಾಂತರ ಮಾಡುವ ಲವ್ ಅಟ್ ಬ್ಯಾಕ್ ಸೈಟ್ ಎಂದು ಮಾಜಿ ಸಚಿವ ಆರ್. ಅಶೋಕ್ (R Ashoka) ಲೇವಡಿ ಮಾಡಿದ್ದಾರೆ.

Love Jihad

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ, ಲವ್ ಅಟ್ ಬ್ಯಾಕ್ ಸೈಟ್ ಎಂದು ಅರ್ಥ. ಅಲ್ಲಿ ಲವ್ ಗೆ ಟ್ರೈನಿಂಗ್ ಕೊಡುತ್ತಾರೆ. ಅವರು ಹಾಗೇ ಹೋಗಿ ಲವ್ ಮಾಡಲ್ಲ. ಮೊದಲೇ ಪ್ರಿಪೇರ್ ಮಾಡಿಕೊಂಡಿರುತ್ತಾರೆ. ಒಳ್ಳೆಯ ಬೈಕ್ ಕೊಡಿಸುತ್ತಾರೆ, ಬಾಡಿ ಬಿಲ್ಡ್ ಮಾಡಲು ಜಿಮ್‌ಗೆ ಕಳಿಸುತ್ತಾರೆ. ಒಳ್ಳೆ ಬಟ್ಟೆ ಕೊಟ್ಟು ಖರ್ಚಿಗೆ ಹಣವನ್ನೂ ಕೊಡ್ತಾರೆ. ಎಲ್ಲಾ ಮಾಡಿ, ಹಿಂದೂ ಹುಡುಗಿಯರನ್ನ ಲವ್ ಮಾಡಿ ಅಂತಾ ಕಳಿಸುತ್ತಾರೆ. ಇದು ನಿಜವಾದ ಲವ್ ಜಿಹಾದ್ ಎಂದು ಹೇಳಿದ್ದಾರೆ.

Siddaramaiah 11

ಹೀಗೆ ಮತಾಂತರ ಮಾಡಿ ದೇಶವನ್ನ ಕಪಿಮುಷ್ಠಿಯಲ್ಲಿ ಹಿಡಿಯಲು ಯತ್ನಿಸಿದ್ದರು. ಆದರೆ, ಬಿಜೆಪಿ ಸರ್ಕಾರ (BJP Government) ಎಲ್ಲದಕ್ಕೂ ಕಡಿವಾಣ ಹಾಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಗೇಟ್ ಓಪನ್ ಮಾಡಿ ಮುಕ್ತ ಅವಕಾಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ ಮತಾಂತರಕ್ಕೆ ಸಿದ್ದರಾಮಯ್ಯನವರೇ (Siddaramaiah) ರಾಯಭಾರಿ ಎಂದು ಮುಖ್ಯಮಂತ್ರಿಗಳನ್ನ ಟೀಕಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡ್ತಿದ್ದ ಐವರು MBBS ವಿದ್ಯಾರ್ಥಿಗಳು ಅರೆಸ್ಟ್

ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಅವರು ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದ್ರೆ, ನಮ್ಮ ಪಕ್ಕ ಹಾಗೂ ಎದುರಿನ ಮನೆಯ ಅಮರನಾಥ್, ಅಬ್ದುಲ್ ಘನಿ ಆಗ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗಿಲ್ಲ ಕೇಂದ್ರದ ಅಕ್ಕಿ – ಆಶಾಭಾವನೆಯಿಂದ ಬಂದ ನಮಗೆ ಎರಡನೇ ಬಾರಿ ನಿರಾಸೆ: ಮುನಿಯಪ್ಪ

ಬ್ರಿಟಿಷರು ಕೂಡ ಈ ದೇಶ ನಮ್ಮ ಕೈಯಲ್ಲಿ ಉಳಿಯಬೇಕು ಅಂದ್ರೆ ಮತಾಂತರ ಆಗಬೇಕು ಎಂದಿದ್ದರು. ಬಾಬರ್, ಔರಂಗಜೇಬ್ ಕೂಡ ಈ ದೇಶ ನಮ್ಮ ಕೈಗೆ ಬರಬೇಕಾದ್ರೆ ಎಲ್ಲರೂ ಮುಸ್ಲಿಂ ಆಗಬೇಕು ಎಂದಿದ್ದರು. ಅದಕ್ಕೆ ಸಾಕ್ಷಿ ಇಲ್ಲೇ ಇದ್ದಾರೆ ನೋಡಿ, ಕೆ.ಜಿ.ಬೋಪಯ್ಯನವರು ಎಂದರು. ಬೋಪಯ್ಯ ಅಂದ್ರೆ ಬೋಪಯ್ಯನವರನ್ನ ನೋಡಬೇಡಿ. ಅವರಲ್ಲ ಮಾಡಿದ್ದು. ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಮತಾಂತರ ಮಾಡಿದ್ದ. ಈಗ ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share This Article