ದಿಸ್ಪುರ್: ಲವ್ ಜಿಹಾದ್ (Love Jihad) ವಿಚಾರವಾಗಿ ಅಸ್ಸಾಂನಲ್ಲಿ (Assam) ಭಾರೀ ರಾಜಕೀಯ ನಡೆದಿದೆ. ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಕೃಷ್ಣ-ರುಕ್ಮಿಣಿ (Krishna Rukmini) ಪ್ರೇಮಗಾಥೆಗೆ ಪರೋಕ್ಷವಾಗಿ ಲವ್ ಜಿಹಾದ್ ಟಚ್ ನೀಡಿದ್ದಾರೆ. ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಅಸ್ಸಾಂನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿ ಮತ್ತು ಆಕೆಯ ತಂದೆ ತಾಯಿಯನ್ನು ಕೊಂದಿದ್ದ. ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಕರೆದಿದ್ದರು. ಈ ಹೇಳಿಕೆಯನ್ನು ವಿರೋಧಿಸುವ ಭರದಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ (Bhupen Borah) ಕೃಷ್ಣ-ರುಕ್ಮಿಣಿ ಮದುವೆ ವಿಚಾರವನ್ನು ಎಳೆದುತಂದಿದ್ದಾರೆ.
Advertisement
Advertisement
ಲವ್ ಜಿಹಾದ್ ಮಹಾಭಾರತದಲ್ಲೂ (Mahabharat) ನಡೆದಿದೆ. ಪುರಾಣ ಗ್ರಂಥಗಳಲ್ಲಿ ಕೃಷ್ಣನು ರುಕ್ಮಿಣಿಯನ್ನು ಓಡಿಸಿಕೊಂಡು ಹೋಗಿರುವ ಉಲ್ಲೇಖವಿದೆ. ಇಂದಿನ ಕಾಲದಲ್ಲಿ ಬೇರೆ ಬೇರೆ ಧರ್ಮ, ಬೇರೆ ಬೇರೆ ಜಾತಿಗಳ ಯುವಕ-ಯುವತಿಯರು ಮದುವೆ ಆಗುವುದು ಸಾಮಾನ್ಯವಾಗಿದೆ. ಇದನ್ನು ಲವ್ ಜಿಹಾದ್ಗೆ ಹೋಲಿಸುವುದು ಸರಿಯಲ್ಲ ಎಂದು ಬೋರಾ ಹೇಳಿಕೆ ನೀಡಿದ್ದಾರೆ.
Advertisement
ಈ ಹೇಳಿಕೆಗೆ ಕೆರಳಿದ ಹಿಮಾಂತ ಶರ್ಮಾ, ಇದು ಖಂಡನೀಯ, ಎಲ್ಲಾ ಸನಾತನಿಗಳು ಬೋರಾ ವಿರುದ್ಧ ಕೇಸ್ ದಾಖಲಿಸಿದರೆ, ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇರಲು ಸಾಧ್ಯವಿಲ್ಲ. ಯಾರಾದರೂ ದೂರು ನೀಡಿದರೆ ಅವರನ್ನು ಬಂಧಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಡ್ರೋನ್ ಮೂಲಕ ಪಂಜಾಬ್ಗೆ ಡ್ರಗ್ಸ್ ಸಪ್ಲೈ ಮಾಡಲಾಗ್ತಿದೆ: ಪಾಕ್ ಪ್ರಧಾನಿ ಆಪ್ತ
Advertisement
ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ಭೂಪೇನ್ ಬೋರಾ ವೈಷ್ಣವ ಪ್ರಾರ್ಥನೆ ಹಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ರಾಹುಲ್ಗೆ ಮೊಣಕಾಲು ನೋವು – ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ
Web Stories