ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ರಿಜಿಸ್ಟರ್ ಮ್ಯಾರೇಜ್(Register Marriage) ಆಗಲು ಹೊರಟಿದ್ದ ಸಂದರ್ಭ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದಿರುವ ಘಟನೆ ನಡೆದಿದೆ. ಆದರೆ ಈ ಮದುವೆಗೆ ನನ್ನ ಯಾವುದೇ ಆಕ್ಷೇಪವಿಲ್ಲ, ಅವರಿಬ್ಬರು ಸಂತೋಷವಾಗಿದ್ದರೆ ಅಷ್ಟೇಸಾಕು ಎಂದು ಯುವತಿಯ ತಾಯಿ ಹೇಳಿಕೆ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಉಮಾ ಪ್ರಶಾಂತ್, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅನ್ಯ ಕೋಮಿನ ಯುವಕ ಹಾಗೂ ಯುವತಿ ವಿವಾಹ ನೋಂದಣಿ ಮಾಡಲೆಂದು ಇಂದು ಹೋಗಿದ್ದರು. ಈ ಸಂದರ್ಭ ಕೆಲ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು, ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದರು.
Advertisement
Advertisement
ಈ ವೇಳೆ ಯುವಕ ತನ್ನ ಮೇಲೆ ಹಿಂದೂ ಪರ ಸಂಘಟನೆಯವರು ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾನೆ. ಅವನ ದೂರಿನನ್ವಯ ಹಿಂದೂ ಪರ ಸಂಘಟನೆಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಡಿತ – ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿದ್ದ ಮೂವರು ಒಂದೇ ಸಮಯದಲ್ಲಿ ಸಾವು
Advertisement
Advertisement
ಠಾಣೆಯ ಮುಂದೆ ಕಣ್ಣೀರು ಹಾಕಿದ ಯುವತಿಯ ತಾಯಿ ಶೋಭಾ, ನನ್ನ ಮಗಳ ಜೀವವೇ ನನಗೆ ಮುಖ್ಯ. ಅವರಿಬ್ಬರ ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವಳಿಗೆ ಹಾಗೂ ನನ್ನ ಅಳಿಯನಿಗೆ ಯಾವುದೇ ತೊಂದರೆಯಾಗಬಾರದು. ಅವರಿಬ್ಬರೂ ಮದುವೆಯಾಗಿ ಚೆನ್ನಾಗಿದ್ದರೆ ಅಷ್ಟೇ ಸಾಕು. ಅವರಿಬ್ಬರಿಗೂ ಸಹಿ ಹಾಕಲು ಬಿಟ್ಟು, ಕಳುಹಿಸಿಕೊಡಿ. ಅವರಿಬ್ಬರೂ ಹೂವಿನ ಹಾರ ಹಾಕಿಕೊಂಡು ಲಕ್ಷ್ಮೀಪುರಕ್ಕೆ ಬರಬೇಕು ಎಂದು ಬೇಡಿಕೊಂಡರು.
ಯುವತಿಯನ್ನು ವಿಚಾರಣೆಗೆಂದು ಪೊಲೀಸ್ ಜೀಪ್ ಹತ್ತಿಸುವಾಗ, ನನ್ನ ಮಗಳನ್ನು ನೋಡಲು, ಮಾತನಾಡಲು ಬಿಡಿ ಎಂದು ಯುವತಿಯ ಗೋಗರೆದಿದ್ದಾರೆ. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್‌ವೈ ಅಭಿನಂದನೆ