ಬೆಂಗಳೂರು: ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಲಾಲ್ ಫೈಟ್, ಹಿಜಬ್ ವಿವಾದ ಹಾಗೂ ಧರ್ಮ ದಂಗಲ್ ಕುಲುಮೆಯಲ್ಲಿರುವ ಕರ್ನಾಟಕದಲ್ಲಿ ಈಗ ಲವ್ ಜಿಹಾದ್ ಮೆಗಾ ಕ್ಯಾಂಪೇನ್ ಶುರುವಾಗಿದೆ. ಈ ಬಾರಿ ಹಿಂದೂ ಸಂಘಟನೆಗಳು (Hindu Organisations) ವಿಭಿನ್ನವಾಗಿ ಲವ್ ಜಿಹಾದ್ (Love Jihad) ವಿರುದ್ಧ ಹೋರಾಟಕ್ಕೆ ಅಖಾಡ ಸಿದ್ಧಮಾಡಿಕೊಂಡಿದೆ.
ದೆಹಲಿಯ ಶ್ರದ್ಧಾ ವಾಕರ್ (Shraddha Walker) ಅಮಾನುಷ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಫ್ತಾಬ್ ಅಮೀನ್ ಪೂನಾವಾಲನ (Aftab Amin Poonawala) ಕ್ರೂರ ವರ್ತನೆ, ಶ್ರದ್ಧಾ ದೇಹವನ್ನು 35 ಪೀಸ್‌ಗಳಾಗಿ ಕತ್ತರಿಸಿದ್ದು ಇವೆಲ್ಲವೂ ಜನಾಕ್ರೋಶಕ್ಕೆ ಕಾರಣವಾಗಿದೆ. ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಜಾಗೃತಿ ಮೂಡಿಸುವ ಸಲುವಾಗಿ ಹಿಂದೂ ಸಂಘನೆಗಳು ಹೊಸ ಅಭಿಯಾನ ಶುರು ಮಾಡಿವೆ. ಇದನ್ನೂ ಓದಿ: ಕುಕ್ಕೆಯಲ್ಲಿ ಮೊದಲ ಬಾರಿಗೆ ವ್ಯಾಪಾರದಿಂದ ದೂರ ಉಳಿದ ಮುಸ್ಲಿಂ ವ್ಯಾಪಾರಿಗಳು- ಸಂಘರ್ಷವಿಲ್ಲದೆ ಜಾತ್ರೆ ಸಂಪನ್ನ
ಕರಾವಳಿ ಭಾಗದಲ್ಲಿ ಈಗಾಗಲೇ ನಾನಾ ಕಡೆ ಲವ್ ಜಿಹಾದ್ (Love Jihad) ಜಾಗೃತಿಗಾಗಿ ಪೋಸ್ಟರ್ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಹಿಂದೂ ಹುಡುಗಿ ಶ್ರದ್ಧಾ ವಾಕಾರ್ ದೇಹವನ್ನು 35 ಪೀಸ್ ಮಾಡಲಾಯ್ತು. ಇದಕ್ಕೆ ಕಾರಣ ಲವ್ ಜಿಹಾದ್. ನೀವು ಈಕೆಯಂತೆ ಈ ಜಾಲಕ್ಕೆ ಬಲಿಯಾಗಬೇಡಿ ಅಂತಾ ಪೋಸ್ಟರ್ ಅಳವಡಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಹತ್ಯೆ ಮಾಡಿದ್ದು ನಾನೇ, ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ – ಪಾಲಿಗ್ರಾಫ್ ಪರೀಕ್ಷೆಯಲ್ಲಿ ಅಫ್ತಾಬ್ ಹೇಳಿಕೆ
ಲವ್ ಜಿಹಾದ್ ಜಾಗೃತಿ ಮೂಡಿಸಲು ಇದೇ ವಿಚಾರವಾಗಿ ಹೋರಾಟದ ರೂಪುರೇಷೆಗೂ ಹಿಂದೂ ಸಂಘಟನೆಗಳು ಅಖಾಡ ಸಿದ್ಧಪಡಿಸಿಕೊಂಡಿವೆ. ರಾಜ್ಯದ ನಾನಾ ಕಡೆಗಳಲ್ಲಿ ಪೋಸ್ಟರ್ ಅಳವಡಿಸಲು ಚಿಂತನೆ ನಡೆಸಿವೆ. ಲವ್ ಜಿಹಾದ್ ವಿರುದ್ಧ ವ್ಯಾಪಕ ಹೋರಾಟ ನಡೆಸುವ ಬಗ್ಗೆಯೂ ಸಂಘಟನೆಗಳು ಪ್ಲ್ಯಾನ್ ಮಾಡಿವೆ.