ಹಿಂದೂ ಯುವಕನಂತೆ ಸೋಗು – ಮಗಳನ್ನು ಕರೆ ತರುವಂತೆ ಪೋಷಕರಿಂದ ಪ್ರತಿಭಟನೆ

Public TV
2 Min Read
hubballi love jihad

– ಧರ್ಮ ದಂಗಲ್‌ ಮಧ್ಯೆ ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಕೇಸ್‌
– ಯುವಕನನ್ನು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಮುತಾಲಿಕ್‌ ಡೆಡ್‌ಲೈನ್‌

ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಧರ್ಮ ದಂಗಲ್ ನಡೆಯುತ್ತಿರುವ ಹೊತ್ತಿನಲ್ಲಿ, ಹುಬ್ಬಳ್ಳಿಯಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಕಳೆದ ತಿಂಗಳ ಹಿಂದೆ ಗದಗ ಮೂಲದ ಗೃಹಿಣಿಯ ಲವ್ ಜಿಹಾದ್ ಪ್ರಕರಣ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಹೇಗಾದರೂ ಮಾಡಿ ನಮ್ಮ ಮಗಳನ್ನು ಲವ್ ಜಿಹಾದ್ ನಿಂದ ಕಾಪಾಡಿ ಮತ್ತೆ ಮನೆಗೆ ಕರೆತನ್ನಿ ಎಂದು ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಪೊಲೀಸ್ ಠಾಣೆಯ ಎದುರು ಧರಣಿಗೆ ಮುಂದಾಗಿದ್ದಾರೆ.

ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿಸಿ ಮದುವೆಯಾಗಿದ್ದಾನೆ. ಪ್ರಕರಣದ ಆರೋಪಿಯನ್ನು ಕೂಡಲೇ ಬಂಧನ ಮಾಡಿ ಅಂತ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಮತ್ತು ಯುವತಿಯ ಪಾಲಕರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ಎದುರು ಧರಣಿ ಕುಳಿತ್ತಿದ್ದಾರೆ.

hubballi love jihad 4

ಏನಿದು ಪ್ರಕರಣ?
ಹುಬ್ಬಳ್ಳಿಯ ಕೇಶ್ವಾಪುರದ ನಿವಾಸಿ ಇಬ್ರಾಹಿಂ ಮತ್ತು ಕಮರಿಪೇಟೆ ಸ್ನೇಹ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ರಾಹಿಂ ಪ್ಲಂಬರಿಂಗ್ ಕೆಲಸ ಮಾಡುತ್ತಿದ್ದರೆ ಸ್ನೇಹ ಟೈಲರಿಂಗ್ ಕೆಲಸ ಮಾಡುತ್ತಿದ್ದಳು. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

ಸ್ನೇಹಳ ಅಣ್ಣ ಪವನ್ ಮೂಲಕ ಇಬ್ರಾಹಿಂ ಪರಿಚಯ ಮಾಡಿಕೊಂಡಿದ್ದ. ಇದಾಗ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ಕಳೆದ ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಈ ವರ್ಷ ಫೆಬ್ರವರಿ 11 ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದೆ. ಇದಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

hubballi love jihad 1

ಮೋಸದಿಂದ ಮದುವೆ:
ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ಮಾಡಿ ತಮ್ಮ ಮಗಳನ್ನು ಇಬ್ರಾಹಿಂ ಮೋಸದಿಂದ ಮದುವೆಯಾಗಿದ್ದಾನೆ. ಅಲ್ಲದೆ  ಮದುವೆಯಾದಾಗ ಅವಳು ಅಪ್ರಾಪ್ತೆಯಾಗಿದ್ದಳು. ದಾಖಲೆಗಳಲ್ಲಿ ಇರುವ ಮದುವೆಯ ದಿನ ಅಂದ್ರೆ ಫೇ 11 ರಂದು ಸ್ನೇಹ ಮನೆಯಲ್ಲೇ ಇದ್ದಳು. ಮದುವೆ ಪತ್ರದಲ್ಲಿ ಸಹಿ ಸ್ನೇಹಳದ್ದಲ್ಲ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಇಬ್ರಾಹಿಂ ಸ್ನೇಹಳನ್ನು ಮದುವೆಯಾಗಿದ್ದಾನೆ. ಈ ಮದುವೆಗೆ ಗದಗ್‌ ಸಬ್ ರಿಜಿಸ್ಟರ್ ಕುಮ್ಮಕ್ಕಿದೆ ಎಂದು ಸ್ನೇಹ ತಾಯಿ ಯಲ್ಲಮ್ಮ ಆರೋಪಿಸಿದ್ದಾರೆ.

ಎಪ್ರಿಲ್ 2 ರಂದು ಬೇಂಡಿಗೇರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ಸ್ನೇಹ ಕುಟುಂಬಸ್ಥರು ನೀಡಿದ್ದಾರೆ. ಆದರೆ ಪೊಲೀಸರು ಯಾವುದೇ ತನಿಖೆ ನಡೆಸದೇ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ, ಸ್ನೇಹ ಕುಟುಂಬಸ್ಥರು ಜೊತೆಗೆ ಕೆಲವು ಹಿಂದೂಪರ ಸಂಘಟನೆಗಳು ಉಪನಗರ ಠಾಣೆ ಮುಂದೆ ಬುಧವಾರ ಬೆಳಗ್ಗೆಯಿಂದ ಸಂಜೆಯ ತನಕ ಧರಣ ನಡೆಸಿದ್ದಾರೆ. ಧರಣಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಎಚ್ಚೆತ್ತ ಪೊಲೀಸರು ಯುವತಿ ತಾಯಿಯಿಂದ ಮತ್ತೊಂದು ದೂರು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 9 ಮಂದಿ ಮದುವೆಯಾದ ಮಾಡೆಲ್, ಒಬ್ಬಳಿಗೆ ಡಿವೋರ್ಸ್, ಮತ್ತಿಬ್ಬರನ್ನು ಮದುವೆಯಾಗುವ ಬಯಕೆ

hubballi love jihad 1

ಸುದ್ದಿ ತಿಳಿದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬುಧವಾರ ಧರಣಿ ಸ್ಥಳಕ್ಕೆ ಆಗಮಿಸಿ ಪಾಲಕರ ಜೊತೆಗೆ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಮುತಾಲಿಕ್, ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ, ಬಿಜೆಪಿ ಅಧಿಕಾರದಲ್ಲಿದ್ದರೂ ಇದರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿಲ್ಲ. ಅವರ ಮನೆಯ ಹೆಣ್ಣು ಮಕ್ಕಳಿಗೆ ಹೀಗಾದರೆ ಅವರಿಗೆ ಬುದ್ದಿ ಬರುತ್ತೆ. ನಾಳೆ ಮಧ್ಯಾಹ್ನ 12 ಗಂಟೆಯ ತನಕ ಸಮಯ ನೀಡುತ್ತವೆ. ಒಂದು ವೇಳೆ ಯುವಕನನ್ನು ಬಂಧಿಸಿ ಯುವತಿಯನ್ನು ಕರೆತರದಿದ್ದರೆ, ಹೋರಾಟ ಹಾದಿ ಬೇರೆ ರೂಪ ಪಡೆದುಕೊಳ್ಳುತ್ತದೆ. ಮುಂದಾಗುವ ಅನಾಹುತಕ್ಕೆ ಬಿಜೆಪಿ ನಾಯಕರೇ ಕಾರಣವಾಗಲಿದ್ದಾರೆ ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *