ಹಾಯ್ ತೇಜಸ್ವಿ..
ನಿನ್ನ ಡಬ್ಬ ಲೆಟರ್ ಥರ ನಾನು ಸೌಖ್ಯ.. ನೀ ಸೌಖ್ಯಾನಾ? ಚಿನ್ನ, ಬಂಗಾರ ಅಂತೆಲ್ಲ ಬರಿಯಲ್ಲ ತೇಜಸ್ವಿ ನಾನು.. ನಿನ್ನಷ್ಟೆಲ್ಲ ಮಾತಾಡೋಕಾಗಲಿ, ಬರೆಯೋಕಾಗಲಿ ನನಗೆ ಬರಲ್ಲ ಹಾಗೇ ಸುಮ್ನೆ ಬರಿತಿದಿನಿ.. ಇದನ್ನೇ ಓದಿ ಖುಷಿ ಪಡು, ಅಷ್ಟೇ!
ನೀನು ಕಳೆದ ವಾರ ಬರೆದ ಕತೆನೆಲ್ಲ ಓದಿದೆ. ʻನನಗೆಲ್ಲ ಗೊತ್ತು ತೇಜಸ್ವಿ..!ʼ ನೀನು ಅವತ್ತು ಬಸ್‌ಲ್ಲಿ ನನ್ನ ಪಕ್ಕದಲ್ಲೇ ಕೂರಬೇಕು ಅಂತ ಬಂದೆ, ಆದ್ರೆ ಹಿಂದಿನ ಸೀಟ್‌ಗೆ ಹೋದೆ..! ಮಾಸ್ಕ್ ನೀನು ಮುಖಕ್ಕೆ ಮಾತ್ರ ಹಾಕಿದ್ದು ತೇಜಸ್ವಿ.. ನಿನ್ನ ಹೃದಯಕ್ಕಲ್ಲ… ಅಥವಾ ನನ್ನ ಹೃದಯ (Heart) ಅಷ್ಟೊಂದು ಕುರುಡಾ? ಅದಕ್ಕೆಲ್ಲ ಗೊತ್ತಾಗತ್ತೆ ಕಣೋ..! ಇದನ್ನೂ ಓದಿ: ಪ್ರೇಮ ನೌಕೆಯ ಕಿಟಕಿ ಅಂಚಲ್ಲಿ ಸಿಕ್ಕ ಕಾಡು ಮಲ್ಲಿಗೆ ಹೂ!
ಎಷ್ಟೊಂದು ಸಲೀಸಾಗಿ ʻನನಗೆ ಮಾತ್ರ ನೀನು ಇರೋದ್ ಯಾಕೆ ಗೊತ್ತಾಯ್ತೋ? ನಿನಗೂ ಗೊತ್ತಾಗಬೇಕಿತ್ತು ಅಂತ ಬರೆದಿದಿಯಾ. ನೀನಾಗೇ ಮಾತಾಡಿಸ್ತೀಯ ಅಂತ ತುಂಬಾ ಕಾದೆ. ನೀನು ರಮ್ಯಾನ ಜೊತೆ ಫೇಕ್ ಕಾಲಲ್ಲಿ ಮಾತಾಡ್ವಾಗ, ಅವಳು ನನ್ನ ಜೊತೆ ಚಾಟ್ ಮಾಡ್ತಾನೇ ಇದ್ಲು..! ತೇಜಸ್ವಿ ಜೊತೆ ಕಾಲ್‌ಲ್ಲಿ ಇದಿಯಾ ಕೇಳ್ದೇ.. ಇಲ್ಲ ಅಂದ್ಲು.. ನನಗೆ ಅನುಮಾನ ಬಗೆಹರಿಯದೇ, ಅವಳಿಗೆ ಕಾಲ್ ಮಾಡ್ದೇ, ರಿಂಗ್ ಆಯ್ತು..! ಅವಾಗ್ಲೇ ಗೊತ್ತಾಯ್ತು.. ನೀನು ನೋಡಿದ್ರೆ ನನಗೆ ಕೇಳಲಿ ಅಂತ ಜೋರ್ ಜೋರಾಗಿ ಅವಳ ಹೇಸರು ಹೇಳಿ ಮಾತಾಡ್ತಿದ್ದೆ.. ಜೋರ್ ನಗು ಬಂತು ಕಣೋ…
ಮನಸ್ಸು ಎಲ್ಲೇ ಹೋದ್ರೂ ನಿನ್ನನ್ನೇ ಹುಡುಕುತ್ತೆ… ನಿನ್ನ ಮುಖ, ಧ್ವನಿಯನ್ನೇ ಹುಡುಕತ್ತೆ… ಸಾವಿರಾರು ಜನರ ಮಧ್ಯೆ ನೀನು ಇದ್ರೂ ನನಗೆ ಗೊತ್ತಾಗತ್ತೆ ತೇಜಸ್ವಿ.. ಹಾಗಿದ್ದಾಗ ಆ ಪುಟ್ಟ ಬಸ್‌ಲ್ಲಿ ನೀನು ಬಂದು ಕೂತಿದ್ದು ಗೊತ್ತಾಗಲ್ವೇನೋ ಪಾಪಚ್ಚಿ! ನೀನೆಷ್ಟು ಮುಗ್ಧ..
ಪತ್ರದಲ್ಲಿದ್ದ ಆಸೆಗಳಿಗೆಲ್ಲ ಸ್ವಾಗತ ಅಂತ ಹೇಳ್ಬಿಡ್ಲಾ… ನಿನ್ನ ಇನ್ನೂ ಸತಾಯಿಸ್ಲಾ ಗೊತ್ತಾಗ್ತಿಲ್ಲ. ನಿನ್ನ ಕೋಲುದ್ದದ ಕೈಗಳಲ್ಲಿ ನನ್ನ ಮನಸ್ಸನ್ನ ತಬ್ಬಬೇಕು… ಮನದಲ್ಲಿ ಜಾರಿ ಇಳಿಬಿಟ್ಟ ಜಡೆಗೆ ಮಲ್ಲಿಗೆಯನ್ನೂ ಮುಡಿಸಬೇಕು..! ʻಕಾಡುʼ ಮಲ್ಲಿಗೆ.. (Kaadu Mallige) ಸದಾ ಕಾಡಬೇಕು..! ನನ್ನ ಘಮಕ್ಕಿಂತಲೂ ನಿನ್ನ ಪ್ರೇಮದ ಘಮ ಅದರಲ್ಲಿ ಬೆರೆತಿರಬೇಕು. ನನಗೂ ಇದೇ ಆಸೆ ತೇಜಸ್ವಿ..
ಈ ಥರ ಪ್ರೇಮ (Love), ಸಿನಿಮಾ, ಕತೆ, ಕವಿತೆ (Poems) ಕಾದಂಬರಿಗಳಲ್ಲಿ ಮಾತ್ರ ಆಗೋದು ಅಂತ ಅನ್ಸೋದು. ಅದನ್ನೆಲ್ಲ ನೀನು ಸುಳ್ಳು ಮಾಡ್ಬಿಟ್ಟೆ .. ʻಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದುʼ ಈ ಹಾಡು ನಿನ್ನ ಸಲುವಾಗಿಯೇ ನನಗೆ ಎಷ್ಟೊಂದು ಕಾಡಿತ್ತು ಗೊತ್ತಾ? ಎಷ್ಟೊಂದು ಸುಂದರವಾದ ಭಾವನೆಗಳು… ಮದುರವಾದ ನೆನಪು.. ನೋವು, ಖುಷಿ… ಲವ್ ಯು ಕಣೋ!
ತೇಜಸ್ವಿ ನಾಳೆ ನಾವು ಒಂದಾಗ್ತಿವೋ ಇಲ್ವೋ ಗೊತ್ತಿಲ್ಲ… ಆದ್ರೆ ನನ್ನ ಪ್ರೀತಿ ನಿನ್ನ ಮೇಲೆ ಸದಾ ಇರುತ್ತೆ… ನಿನಗೂ 100% ಇರುತ್ತೆ ಅಂದ್ಕೊಳ್ತೀನಿ.. ಇಷ್ಟಾದ್ರೂ ಈ ಅನುಮಾನ ಯಾಕೆ ಗೊತ್ತಾ..? ಮೊದಲನೇ ನೋಟದಲ್ಲಿ ಕಳೆದು ಹೋದಾಗ, ಪ್ರೇಮಕ್ಕೆ ಸೆರೆ ಸಿಕ್ಕಾಗ ಇಲ್ಲದ ಅದೆಷ್ಟೋ ಸರಪಳಿಗಳು ನಮ್ಮ ಸುತ್ತ ಇದಾವೆ. ಜಾತಿ.. ಧರ್ಮ.. ದುಡ್ಡು… ಕುಟುಂಬ ಇದೆಲ್ಲ ನಮ್ಮ ಪ್ರೀತಿಲಿ ನಾಳೆ ಕೋಲಾಹಲನೇ ಮಾಡ್ಬಹುದಲ್ವಾ? ನಾನಂತೂ ನಿನಗೆ ಸಿಕ್ಕೇ ಬಿಡ್ತೀನಿ ಅಂತ ಭರವಸೆ ಕೊಡಲ್ಲ… ಪ್ರೀತಿ… ಪ್ರೀತಿ ಅಷ್ಟೇ… ಅದನ್ನ ಮಾತ್ರ ಪ್ರಮಾಣಿಕವಾಗಿ ಮಾಡ್ತೀನಿ..!! ಇದನ್ನೂ ಓದಿ: ಅವಳ ಮೂಗಿನ ತುದಿ ಕೋಪ ನಂಗಿಷ್ಟ!



