ಕೋಲ್ಕತ್ತಾ: ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೈಲು (Jail) ಸೇರಿದ್ದ ಇಬ್ಬರು ಆರೋಪಿಗಳಿಗೆ ಜೈಲಿನಲ್ಲೇ ಪ್ರೇಮಾಂಕುರವಾಗಿ ಬಳಿಕ ಅವರು ಪೆರೋಲ್ (Parole) ಮೂಲಕ ಹೊರಬಂದು ಮದುವೆಯಾಗಿರುವ (Marriage) ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.
ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಹಾಗೂ ಪಶ್ಚಿಮ ಬಂಗಾಳದ ಶಹನಾರಾ ಖಾತುನ್ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದ್ದರು. ಆರೋಪಿಗಳಿಗೆ ಬಂಧನಕ್ಕೂ ಮೊದಲು ಪರಸ್ಪರ ಪರಿಚಯ ಇರಲಿಲ್ಲ. ಹಾಸಿಮ್‌ಗೆ 8 ವರ್ಷ ಹಾಗೂ ಶಹನಾರ್‌ಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಬ್ಬರೂ ಕೈದಿಗಳು ಬರ್ಧಮಾನ್ ಕೇಂದ್ರ ತಿದ್ದುಪಡಿ ಸಂಸ್ಥೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
Advertisement
Advertisement
ಇಬ್ಬರನ್ನೂ ಒಂದೇ ಸುಧಾರಣಾ ಗೃಹದಲ್ಲಿ ಇಡಲಾಗಿತ್ತು. ಇಬ್ಬರ ಕುಟುಂಬದವರೂ ಒಂದೇ ಸಮಯಯದಲ್ಲಿ ಅವರನ್ನು ಭೇಟಿಯಾಗಲು ಬಂದಿದ್ದ ಸಂದರ್ಭ ಕೈದಿಗಳು ಒಬ್ಬರಿಗೊಬ್ಬರು ಪರಿಚಯವಾದರು. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಇಬ್ಬರಿಗೂ ಪರಸ್ಪರ ಪ್ರೇಮ ಹುಟ್ಟಿತ್ತು. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆ
Advertisement
ಈ ಬಗ್ಗೆ ಜೋಡಿ ಬಳಿಕ ತಮ್ಮ ಕುಟುಂಬಸ್ಥರಿಗೆ ತಿಳಿಸಿ ಮದುವೆಯಾಗುವ ನಿರ್ಧಾರ ಮಾಡಿದರು. ಹಾಸಿಮ್ ಹಾಗೂ ಶಹನಾರಾ 5 ದಿನಗಳ ಪೆರೋಲ್ ಪಡೆದು ಬುಧವಾರ ಬರ್ಧಮಾನ್‌ನ ಮಾಂಟೇಶ್ವರ ಬ್ಲಾಕ್‌ನ ಕುಸುಮ್‌ಗ್ರಾಮ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
Advertisement
ಇದೀಗ ಪೆರೋಲ್ ಮೇಲೆ ಹೊರ ಬಂದು ಮದುವೆಯಾದ ದಂಪತಿ ಮತ್ತೆ ಜೈಲಿಗೆ ತೆರಳಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಬೇಕಿದೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ
Web Stories