Dharwad

ಮಾಡಬಾರದ್ದನ್ನು ಮಾಡಿ ದಕ್ಷಿಣ ಭಾರತ ಹುಡುಗೀರು ಮದ್ವೆಯಾಗೋಕೆ ಲಾಯಕ್ಕಿಲ್ಲ ಎಂದ ವಂಚಕ!

Published

on

Share this

– ಹುಬ್ಬಳ್ಳಿಯಲ್ಲಿ ಆರ್‍ಪಿಎಫ್ ಮಹಿಳಾ ಪೇದೆಗೆ ವಂಚನೆ
– ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ರೈಲ್ವೇ ಎಂಜಿನಿಯರ್

ಹುಬ್ಬಳ್ಳಿ: ಮಹಿಳಾ ಪೊಲೀಸ್ ಪೇದೆಗೆ ಮದುವೆಯಾಗುತ್ತೇನೆಂದು ನಂಬಿಸಿ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರೈಲ್ವೆ ಮಹಿಳಾ ಪೆÇಲೀಸ್ ಪೇದೆಯಾಗಿ ಕೆಲಸ ಮಾಡುತಿದ್ದ ಸೋನಿ (33) ಎಂಬ ಯುವತಿಗೆ ಸೌತ್ ವೆಸ್ಟರ್ನ್ ರೈಲ್ವೆ ಇಂಜಿನಿಯರ್ ಕಮಲೇಶ್ ಎಂಬ ಯುವಕ ಮದುವೆ ಆಗುವುದಾಗಿ ಹೇಳಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಮಾಡಿ ಈಗ ಬೇರೊಂದು ಯುವತಿಯೊಂದಿಗೆ ಮದುವೆಗೆ ಮುಂದಾಗಿದ್ದಾನೆ. ವಂಚನೆಗೆ ಒಳಗಾದ ಯುವತಿ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಯುವತಿಯ ದೂರಿನಲ್ಲಿ ಏನಿದೆ..?
ನಾನು ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಪ್ರೊಟೆಕ್ಷನ್ ಫೋರ್ಸ್ ಹುಬ್ಬಳ್ಳಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಮಹಿಳಾ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದೆ. ಕಳೆದ ಎರಡು ವರ್ಷಗಳ ಹಿಂದೆ ನನಗೆ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಸೀನಿಯರ್ ಸೆಕ್ಷನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಮಲೇಶ್ ಕುಮಾರ್ ಎಂಬುವರ ಪರಿಚಯವಾಯಿತು. ನಂತರ ನಾವಿಬ್ಬರ ಒಳ್ಳೆಯ ಸ್ನೇಹಿತರಾದೆವು. ನಂತರ ಕಮಲೇಶ್ ಆಗಾಗ ನನ್ನೊಂದಿಗೆ ಫೋನ್‍ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದ. ಕಮಲೇಶ್ ಒಂದು ದಿನ ನನ್ನನ್ನು ಪ್ರೀತಿಸುವುದಾಗಿ ಹೇಳಿದ. ಆದ್ರೆ ನಾ ಅದಕ್ಕೆ ಒಪ್ಪಲಿಲ್ಲ.

ಒಂದು ದಿನ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಇರುವ ತನ್ನ ಕ್ವಾಟರ್ಸ್‍ಗೆ ನನನ್ನು ಕರೆದ. ಆದ್ರೆ ನಾ ಹೋಗಲಿಲ್ಲ, ಇಲ್ಲ ನನ್ನ ಮನೆಯವರು ನಿಗಾಗಿ ಕಾಯುತ್ತಿದ್ದಾರೆ. ನಿನನ್ನು ಪರಿಚಯ ಮಾಡಿಕೊಡುವುದಿದೆ ಬಾ ಎಂದು ಕರೆದ. ಮಧ್ಯಪ್ರದೇಶದಿಂದ ನನ್ನ ತಂದೆ ತಾಯಿಗಳು ಬಂದಿದ್ದಾರೆ, ನೀ ಬರಲೇಬೇಕು ಎಂದು ಕೇಳಿಕೊಂಡ. ಹೀಗಾಗಿ ನಾನು ಅವನ ಮನೆಗೆ ಹೋಗಲು ಒಪ್ಪಿದೆ. ಅದೇ ಪ್ರಕಾರವಾಗಿ ನಾನು ಅವನ ಮನೆಗೆ ಹೋದೆ. ಆದ್ರೆ ಅವನ ಮನೆಯಲ್ಲಿ ಯಾರು ಇರಲಿಲ್ಲ. ಅದೇ ಸಮಯದಲ್ಲಿ ಕಮಲೇಶ್ ನನ್ನನ್ನು ಮದುವೆ ಆಗುವುದಾಗಿ ಹೇಳಿ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ. ಆದ್ರೆ ನನಗೆ ತುಂಬಾ ಭಯವಾಯಿತು. ಆದ್ರೆ ಕಮಲೇಶ್ ನನ್ನ ಹಣೆಗೆ ಸಿಂಧೂರ ಇಟ್ಟು ನಮ್ಮ ಮದುವೆ ಆಗಿದೆ, ನೀ ಇನ್ನು ಭಯ ಪಡುವ ಚಿಂತೆ ಇಲ್ಲ ಎಂದು ಹೇಳಿ ನನ್ನನ್ನು ನಂಬಿಸಿದ. ನಂತರ ನಾನು ಅವನನ್ನು ನಂಬಿದೆ. ಹೀಗೆ ಹಲವಾರು ಸಾರಿ ಕಮಲೇಶ್ ನನ್ನನ್ನು ದೈಹಿಕವಾಗಿ ಬಳಸಿಕೊಂಡ. ನಂತರ ನನಗೆ ಅಪಾರ ಪ್ರೀತಿ ತೋರಿಸುತ್ತಿದ್ದ. ಬಳಿಕ ಕೆಲ ದಿನಗಳ ನಂತರ ನನ್ನಿಂದ ದೂರವಾಗ ತೊಡಗಿದ. ನನಗೆ ಅವನು ಇಲ್ಲದ ಜೀವನ ಬೇಸರವಾಗತೊಡಗಿತು. ನೀ ಯಾಕೆ ಹೀಗೆ ಮಾಡುತ್ತೀಯಾ ಎಂದು ಕೇಳಿದರೂ ಅವನು ನನಗೆ ಏನೂ ಹೇಳಲಿಲ್ಲ.

ನೀನು ಹೀಗೆಲ್ಲಾ ಮಾಡಿದ್ರೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡುತ್ತೇನೆ ಎಂದು ನಾನು ಹೇಳಿದಾಗ ನನ್ನ ಬಳಿ ನಿನ್ನ ಅಶ್ಲೀಲ ವಿಡಿಯೋ ಇದೆ. ಇದನ್ನು ಫೇಸ್ ಬುಕ್‍ನಲ್ಲಿ ಕಳಿಸುತ್ತೇನೆ ಎಂದು ಹೆದರಿಸಿದ. ಹೀಗಾಗಿ ಭಯದಿಂದ ಸುಮ್ಮನಾದೆ. ಬಳಿಕ ನೀ ಹೀಗೆ ತಾಳ್ಮೆಗೆಟ್ಟರೆ ಹೇಗೆ..? ನೀ ತಾಳ್ಮೆಯಿಂದ ಇದ್ದುಬಿಡು ನಾ ನಮ್ಮ ಮನೆಯಲ್ಲಿ ಒಪ್ಪಿಸಿ ಮದುವೆ ಆಗುತ್ತೇನೆ ಎಂದು ಹೇಳಿ ಮತ್ತೆ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡಿದ.

ನಂತರ 2015ರ ಡಿಸೆಂಬರ್ ತಿಂಗಳಲ್ಲಿ ಆತನ ಊರಾದ ಹೊಸಂಗಾಬಾದ್ ಹೋಗಿ ತನ್ನ ಮನೆಯವರನ್ನು ಒಪ್ಪಿಸಿ, ಮದುವೆ ಆಗುತ್ತೇನೆ ಎಂದು ಊರಿಗೆ ಹೋದ. ಆದ್ರೆ ಕೆಲ ದಿನಗಳ ನಂತರ ಹುಬ್ಬಳ್ಳಿಗೆ ಬಂದ ಅವನು ನಾ ಬೇರೊಂದು ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಹೇಳಿದ. ಅಲ್ಲದೆ ತನ್ನ ನಿಶ್ಚಿತಾರ್ಥದ ಫೋಟೋಗಳನ್ನು ಫೇಸ್ ಬುಕ್‍ನಲ್ಲಿ ಪ್ರಕಟಿಸಿದ.

ಡಿಸೆಂಬರ್ 19ರಂದು ಆತನ ಮನೆಗೆ ಹೋಗಿ ನೀ ನನಗೆ ಮೋಸ ಮಾಡಿದೆ ಎಂದು ಹೇಳಿದೆ. ಆದಕ್ಕೆ ಆತ, ಸೌಥ್ ಕಿ ಲಡಕಿಯೋ ಸಿರ್ಫ್ ಯೂಸ್ ಕರ್ ಸಕತೆ ಹೈ. ಘರ್ ಬಸಾನೇ ಕೇ ಲಿಯೇ ತುಮ್ ಲೋಗ್ ಲಾಯಕ್ ನಹೀ ಹೈ ಎಂದು ಹೇಳಿದ. ಹೀಗಾಗಿ ಅವನ ಕಠೋರ ಮಾತುಗಳನ್ನು ಕೇಳಿದ ನನಗೆ ತುಂಬಾ ದುಃಖವಾಯಿತು. ನಂತರ ನನ್ನ ಮತ್ತು ಕಮಲೇಶ್ ವಿಚಾರ ಕಮಲೇಶ್ ಮದುವೆ ಆಗುತ್ತಿರುವ ಯುವತಿಯ ಮನೆಯಲ್ಲಿ ಗೊತ್ತಾಯಿತು. ಹೀಗಾಗಿ ಅವನ ನಿಶ್ಚಿತಾರ್ಥ ಕೂಡಾ ಮುರಿದು ಬಿದ್ದಿತ್ತು.

ನಿನ್ನ ಜೊತೆ ದೇಹ ಹಂಚಿಕೊಂಡಿರುವ ನನಗೆ ನಿನ್ನ ಆಸರೆ ಬೇಕು, ನೀ ನನ್ನ ಮದುವೆಯಾಗಿ, ಈ ಸಮಾಜದಲ್ಲಿ ನನನ್ನು ಪತ್ನಿಯಾಗಿ ಸ್ವೀಕರಿಸು ಎಂದು ಅಂಗಲಾಚಿ ಕೇಳಿಕೊಂಡೆ. ಆದ್ರೆ ಅದಕ್ಕೆ ಅವನು ಒಪ್ಪಲಿಲ್ಲ. ನನಗೆ ದಾರಿ ಕಾಣದಾಯಿತು. ಹೀಗಾಗಿ ನಾನೇ ಅವನ ಊರಿಗೆ ಹೋಗಿ ಅವರ ಅಪ್ಪ, ಅಮ್ಮ, ಭಾವ, ಅತ್ತಿಗೆಗೆ ನಮ್ಮ ವಿಷಯ ಹೇಳಿದಿರಿ. ಆದ್ರೆ ಅದಕ್ಕೆ ಅವರು ನಿನ್ನ ಬಳಿ ಸಾಕ್ಷಿ ಇದೆಯಾ ಎಂದು ಕೇಳಿದ್ರು. ನನಗೆ ನನ್ನ ಜೀವನವೇ ಬೇಸರವಾಯಿತು. ನಾ ಮತ್ತೆ ಅಲ್ಲಿಂದ ಹುಬ್ಬಳ್ಳಿಗೆ ಬಂದೆ. ಇಲ್ಲಿ ಬಂದ ಮೇಲೆ ಅವನನ್ನು ಮದುವೆ ಆಗುವಂತೆ ಅಂಗಲಾಚಿ ಕೇಳಿಕೊಂಡೆ. ಪರಿ ಪರಿಯಾಗಿ ಬೇಡಿಕೊಂಡರೂ ಅವನು ನನ್ನನ್ನು ತಪ್ಪಿಸಿ ಓಡಾಡುತ್ತಿದ್ದಾನೆ.

ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಾನು ಲಿಖಿತ ರೂಪದಲ್ಲಿ ದೂರು ನೀಡಿರುವೆ, ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾ ಇಂದು ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡುತ್ತಿರುವೆ. ನೀವಾದರೂ ನನಗೆ ನ್ಯಾಯ ಕೊಡಿಸುತ್ತೀರಿ ಎಂಬ ನಂಬಿಕೆ ನನಗೆ ಉಳಿದಿದೆ.

ಇಂತಿ ನಿಮ್ಮ,

ನೊಂದವಳು

Click to comment

Leave a Reply

Your email address will not be published. Required fields are marked *

Advertisement
Advertisement