ಧಾರವಾಡ: ಪ್ರೀತಿಸಿ ಮದುವೆಯಾಗಿದ್ದ ಯುವಕ ಪೋಷಕರ ವಿರೋಧದ ಹಿನ್ನೆಲೆಯಲ್ಲಿ ತನಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿ ಮನೆಯ ಮುಂದೆ ಧರಣಿ ಕುಳಿತ ಘಟನೆ ಧಾರವಾಡ ಹತ್ತಿಕೊಳ್ಳ ಬಡಾವಣೆಯಲ್ಲಿ ನಡೆದಿದೆ.
ಅಭಿಷೇಕ್ ಪಾಟೀಲ್ (23) ಪ್ರೀತಿಸಿ ಮೋಸ ಮಾಡಿದ ಯುವಕ. ತನ್ನನ್ನು ಮದುವೆಯಾಗಿ ಈಗ ಮೋಸ ಮಾಡಿದ್ದಾನೆ ಎಂದು ಯುವತಿ ಗೀತಾ ಹಳೆಮನಿ (33) ಆರೋಪಿಸಿದ್ದಾರೆ.
ಹುಬ್ಬಳ್ಳಿಯ ಅಶ್ವಮೇಧ ಲೇಔಟ್ ನಿವಾಸಿ ಆಗಿರುವ ಗೀತಾ ಹಳೆಮನಿ ಹಾಗೂ ಅಭಿಷೇಕ ಪಾಟೀಲ್ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಬಳಿಕ ಎಲ್ಲರಂತೆ ದಾಂಪತ್ಯ ಸಂಸಾರ ನಡೆಸಿದ್ದರು. ಇದರ ನಡುವೆ ಅಭಿಷೇಕ್ ಪೋಷಕರು ಇಬ್ಬರ ಮಡುವೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದ್ಯ ಆತ ಯುವತಿಯನ್ನು ಮದುವೆಯೇ ಆಗಿಲ್ಲ ಎಂದು ಬಿಟ್ಟು ಬಂದಿದ್ದಾನೆ.
ಅಭಿಷೇಕನಿಂದ ಮೋಸಕ್ಕೊಳಗಾದ ಯುವತಿ ತನಗೆ ನ್ಯಾಯ ಬೇಕು ಎಂದು ಯುವಕನ ಮನೆ ಎದುರು ಧರಣಿ ಕುತಿದ್ದಾಳೆ. ಯುವತಿಯ ಪೋಷಕರು ಕೂಡ ಮಗಳಿಗೆ ಆದ ಅನ್ಯಾಯದ ವಿರುದ್ಧ ಧರಣಿನಿಗೆ ಸಾಥ್ ನೀಡಿದ್ದಾರೆ. ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಕುರಿತು ಧಾರವಾಡ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv