Connect with us

Chamarajanagar

ಮದ್ವೆಯಾಗೋದಾಗಿ 3 ವರ್ಷ ದೈಹಿಕ ಸುಖ ಅನುಭವಿಸಿ ಕೈಕೊಟ್ಟ ಎಂಜಿನಿಯರ್

Published

on

ಚಾಮರಾಜನಗರ: ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಾಟಕವಾಡಿದ ಯುವಕನೊಬ್ಬ ಆಕೆಯೊಂದಿಗೆ ಮೂರು ವರ್ಷಗಳ ಕಾಲ ದೈಹಿಕ ಸುಖ ಅನುಭವಿಸಿ ಈಗ ಕೈಕೊಟ್ಟಿರುವ ಪ್ರಕರಣ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿ ಗ್ರಾಮದ ಮಹದೇವಪ್ರಸಾದ್, ಪ್ರೀತಿಯ ನಾಟಕವಾಡಿ ಕೈಕೊಟ್ಟಿರುವ ಎಂಜಿನಿಯರ್. ಈತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಅದೇ ತಾಲೂಕಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಪರಿಚಯ ಸ್ನೇಹವಾಗಿ, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಎಲ್ಲ ಕಡೆ ಸುತ್ತಾಡಿದ್ದಾನೆ. ಅಷ್ಟೇ ಅಲ್ಲದೇ ದೈಹಿಕ ಸುಖವನ್ನೂ ಅನುಭವಿಸಿದ್ದಾನೆ. ನಂತರ ಮದುವೆಯಾಗುವ ಮೊದಲೇ ದೈಹಿಕ ಸಂಪರ್ಕ ಹೊಂದುವುದು ಸರಿಯಲ್ಲ ಎಂದು ಯುವತಿಗೆ ಮನವರಿಕೆಯಾಗಿದೆ. ಹಾಗಾಗಿ ದೈಹಿಕ ಸಂಪರ್ಕಕ್ಕೆ ಆಕೆ ನಿರಾಕರಿಸಿದ್ದಾರೆ.

ದೈಹಿಕ ಸಂಪರ್ಕಕ್ಕೆ ನಿರಾಕರಿಸಿದನ್ನೆ ನೆಪವಾಗಿಟ್ಟುಕೊಂಡ ಮಹದೇವಪ್ರಸಾದ್, ಈಗ ನಿನಗು ನನಗೂ ಸಂಬಂಧವೇ ಇಲ್ಲ ಎಂದು ಯುವತಿಗೆ ಕೈಕೊಟ್ಟಿದ್ದಾನೆ. ಈ ಬಗ್ಗೆ ಯುವತಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅತ್ಯಾಚಾರದ ಕೇಸ್ ದಾಖಲಿಸಿದ್ದಾರೆ.

ಇತ್ತ ಅತ್ಯಾಚಾರದ ಕೇಸ್ ದಾಖಲಾಗುತ್ತಿದ್ದಂತೆ ಮಹದೇವಪ್ರಸಾದ್ ನಾಪತ್ತೆಯಾಗಿದ್ದಾನೆ. ಜೊತೆಗೆ ಆತನ ಪೋಷಕರು ಕೂಡ ತಲೆಮರೆಸಿಕೊಂಡಿದ್ದಾರೆ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *