ಬೆಂಗಳೂರು: ಪ್ರೀತಿ (Love) ಕುರುಡು ಅಂತಾರೆ. ಅಂತಹ ಅಮೂಲ್ಯವಾದ ಪ್ರೀತಿಗೆ ಬಲಿಯಾದವರು ಅದೆಷ್ಟೋ ಮಂದಿ. ಅಂತೆಯೇ ಸಿಲಿಕಾನ್ ಸಿಟಿಯಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದು ಹೋಗಿದೆ. ಅವರಿಬ್ಬರೂ ಆರು ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಬ್ರೆಕಪ್ ಆಗಿದ್ದಕ್ಕೆ ಯುವಕ ಸಾವಿನ ದಾರಿ ಹಿಡಿದಿದ್ದಾನೆ.
Advertisement
ಈ ಘಟನೆ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿ ನಡೆದಿದೆ. ರೋಹಿತ್ (25) ಮೃತ ಯುವಕ. ರೋಹಿತ್ ಕೊರಿಯರ್ ಕಂಪನಿ (Courier Company) ಒಂದರಲ್ಲಿ ಕೆಲಸ ಮಾಡ್ತಿದ್ದ. ಈತ ಕಳೆದ ಆರು ವರ್ಷಗಳಿಂದ ಯುವತಿಯೊಬ್ಬಳನ್ನು ಲವ್ ಮಾಡ್ತಿದ್ದ. ಆದರೆ ಕೊನೆ ಬಾರಿ ಭೇಟಿಯಾದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ.
Advertisement
Advertisement
ಮಾತಿಗೆ ಮಾತು ಬೆಳೆದು ಇನ್ನು ಪ್ರೀತಿ ಬೇಡ ನಾವು ಬ್ರೇಕಪ್ (Love Breakup) ಮಾಡಿಕೊಳ್ಳುವ ಎಂಬ ನಿರ್ಣಯಕ್ಕೆ ಯುವತಿ ಬಂದಿದ್ದಾಳೆ. ಇದರಿಂದ ನೊಂದ ಯುವಕ ನೇರವಾಗಿ ಮನೆಗೆ ಬಂದವನೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್
Advertisement
ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆ (Jnanabharathi Police Station) ಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k