ಬಾಲಿವುಡ್ ನಲ್ಲಿ ನಡೆಯುವ ಲವ್ (Love), ಬ್ರೇಕ್ ಅಪ್, ಅಫೇರ್ ಇಂತಹ ವಿಷಯಗಳು ಮೊದಲು ತಿಳಿಯುವುದು ಕರಣ್ ಜೋಹಾರ್ (Karan Johar) ಗೆ. ಹಾಗಾಗಿ ಕಾಫಿ ವಿತ್ ಕರಣ್ ಶೋನಲ್ಲಿ (Koffee With Karan) ಬಹುತೇಕ ಇಂತಹ ಪ್ರಶ್ನೆಗಳನ್ನೇ ಅತಿಥಿಗಳಿಗೆ ಕರಣ್ ಕೇಳುತ್ತಾನೆ. ಬಹುತೇಕ ಅವು ನಿಜವೂ ಆಗಿರುವುದರಿಂದ ಅನೇಕ ನಟ ನಟಿಯರು ಅವುಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತೇಲಿಸಿ ಬಿಟ್ಟಿದ್ದಾರೆ. ಆದರೂ, ಕರಣ್ ಸುದ್ದಿ ಪಕ್ಕಾ ಆಗಿರುತ್ತದೆ.
- Advertisement -
ಬಿಟೌನ್ (Bollywood) ಟಾಪ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಅನೇಕರು ಕರಣ್ ಶೋ ಗೆ ಬಂದಿದ್ದಾರೆ. ತಮ್ಮ ಖಾಸಗಿ ಸಂಗತಿಗಳನ್ನು ಬಟಾಬಯಲು ಮಾಡಿಕೊಂಡಿದ್ದಾರೆ. ತಮ್ಮ ಸೆಕ್ಸ್ ಲೈಫ್ ನಿಂದ ಹಿಡಿದು ಮದುವೆ, ಅಫೇರ್, ಡೇಟಿಂಗ್ ಹೀಗೆ ಸೆನ್ಸಾರ್ ಇಲ್ಲದೇ ಮಾತನಾಡಿದ್ದಾರೆ. ಆದರೂ, ಈವರೆಗೂ ಕರಣ್ ವಿಚಾರವನ್ನು ಕೆದಕಲು ಯಾರೂ ಹೋಗಿರಲಿಲ್ಲ. ಅಲ್ಲದೇ, ಕರಣ್ ಜೀವನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್
- Advertisement -
- Advertisement -
ಮೊನ್ನೆಯಷ್ಟೇ ಕರಣ್ ಶೋ ಗೆ ಅನಿಲ್ ಕಪೂರ್ ಮತ್ತು ವರುಣ್ ಧವನ್ (Varun Dhawan) ಆಗಮಿಸಿದ್ದರು. ಅನಿಲ್ ಕಪೂರ್ ಕೂಡ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಮಾತನಾಡಿದರು. ಈ ವಯಸ್ಸಲ್ಲೂ ಹ್ಯಾಂಡ್ ಸಮ್ ಆಗಿ ಕಾಣುವುದರ ಹಿಂದಿನಿ ಸಿಕ್ರೇಟ್ ಏನು ಅಂತ ಅನಿಲ್ ಕಪೂರ್ ಗೆ ಕೇಳಿದಾಗ, ಕ್ಷಣ ಹೊತ್ತೂ ಯೋಚಿಸಿದೇ ಸೆಕ್ಸ್ ಅಂದರು ಅನಿಲ್. ಹಾಗೆಯೇ ವರಣ್ ಧವನ್ ಅವರನ್ನು ಕೇಳಲಾಯಿತು. ಅದರಲ್ಲೂ ವರಣ್ ಬ್ರೇಕ್ ಅಪ್ ಬಗ್ಗೆ ಕರಣ್ ಕೇಳಿ ತಾವೇ ತಗಲಕ್ಕೊಂಡಿದ್ದಾರೆ.
- Advertisement -
ವರಣ್ ಮದುವೆಗೂ ಮುಂಚೆ ಆದ ಲವ್ ಬ್ರೇಕ್ ಅಪ್ (Breakup) ಬಗ್ಗೆ ಕರಣ್ ಕೇಳಿದಾಗ, ನನ್ನದೇನೂ ಸರಿ ನಿಮ್ಮ ಜೀವನದಲ್ಲೂ ಅದು ನಡೆದಿದೆಯಲ್ಲ ಎಂದು ನೇರವಾಗಿಯೇ ಕೇಳಿದರು. ಕರಣ್ ತಪ್ಪಿಸಿಕೊಳ್ಳುವುದಕ್ಕೆ ನೋಡಿದರು, ಆದರೂ ಧವನ್ ಸುಮ್ಮನೆ ಬಿಡಲಿಲ್ಲ. ಕೊನೆಗೂ ತನ್ನ ಜೀವನದಲ್ಲೂ ಲವ್ ಬ್ರೇಕ್ ಅಪ್ ಆಗಿದೆ. ನಾನು ಹೇಗೆ ಅಂತ ನಿನಗೆ ಗೊತ್ತಲ್ಲ. ಈ ವಿಷಯದಲ್ಲಿ ಸಹಕರಿಸು ಎಂದು ಹೇಳಿ ಟಾಪಿಕ್ ಮುಗಿಸಿಬಿಟ್ಟರು ಕರಣ್. ಅಲ್ಲಿಗೆ ಮೊದಲ ಬಾರಿಗೆ ಕರಣ್ ಲವ್ ಬ್ರೇಕ್ ಅಪ್ ವಿಚಾರ ಆಚೆ ಬಂದಿದೆ.