ಮೊನ್ನೆಯಷ್ಟೇ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಸ್ವತಃ ವಸಿಷ್ಠ ಸಿಂಹ ಅವರೇ ಉಪಸ್ಥಿತರಿದ್ದು, ಮೂಗು ಚುಚ್ಚಿಸಿದ್ದರು. ಆನಂತರ ಅನೇಕ ವಿಡಿಯೋಗಳಲ್ಲಿ ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ್ದರು. ವಿಡಿಯೋಗಳಿಗೆ ‘ಪಾರ್ಟನರ್’ ಎಂದೆಲ್ಲ ಬರೆದುಕೊಂಡಿದ್ದರು. ಇತ್ತೀಚೆಗೆ ಮತ್ತೊಂದು ಸುದ್ದಿ ಕೂಡ ಹೊರ ಬಂದಿತ್ತು. ಇಬ್ಬರೂ ಈಗಾಗಲೇ ದುಬೈ ಪ್ರವಾಸ ಮಾಡಿ ಶಾಪಿಂಗ್ ಕೂಡ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಫೋಟೋ ಕೂಡ ಹೊರ ಬಂದಿದೆ. ನಂತರ ಅಚ್ಚರಿ ಎನ್ನುವಂತೆ ಅವರು ನಿಶ್ಚಿತಾರ್ಥ ಕೂಡ ಮಾಡಿಕೊಂಡರು.
Advertisement
ಯಾವುದೇ ಸುಳಿವು ಕೊಡದೇ ಏಕಾಏಕಿಯಾಗಿ ಇಂಥದ್ದೊಂದು ಸುದ್ದಿ ಕೊಟ್ಟ ತಾರೆಯರು, ಭೇಟಿಯಾಗಿದ್ದು ಎಲ್ಲಿ? ಪ್ರೇಮ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ಶುರು ಮಾಡಿದ್ದು ತೆಲುಗು ಸಿನಿಮಾವೊಂದರಿಂದ ಎಂದು ಹೇಳಲಾಗಿತ್ತು. ಇದನ್ನೂ ಓದಿ: ತಮಿಳಿನತ್ತ ಹೊಂಬಾಳೆ ಫಿಲ್ಮ್ಸ್:ಕೀರ್ತಿ ಸುರೇಶ್ ನಟನೆಯ `ರಘುತಥಾ’ ಚಿತ್ರ ನಿರ್ಮಾಣಕ್ಕೆ ಸಾಥ್
Advertisement
Advertisement
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡರು ಎಂದು ಹೇಳಲಾಗಿತ್ತು. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎನ್ನುತ್ತಾರೆ ಆಪ್ತರು. ಮದುವೆ ಕುರಿತಾಗಿ ಇಷ್ಟೊಂದು ಸುದ್ದಿಯಾದರೂ, ವಸಿಷ್ಠ ಆಗಲಿ ಅಥವಾ ಹರಿಪ್ರಿಯಾ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement
ಆದರೆ, ಇದೀಗ ಹರಿಪ್ರಿಯಾ ತಮ್ಮ ಪ್ರೀತಿ ಹುಟ್ಟಿದ್ದು ಹೇಗೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ತಮ್ಮ ಮತ್ತು ವಸಿಷ್ಠಿ ನಡುವೆ ಪ್ರೇಮ ಅಂಕುರವಾಗಲು ಕಾರಣ ನಾಯಿ ಮರಿ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹರಿಪ್ರಿಯಾ ಮನೆಯಲ್ಲಿ ಈಗಾಗಲೇ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಲಕ್ಕಿ ಸತ್ತ ನಂತರ ಹ್ಯಾಪಿಗಾಗಿ ಮತ್ತೊಂದು ನಾಯಿಯನ್ನು ತಂದುಕೊಟ್ಟಿದ್ದರಂತೆ ವಸಿಷ್ಠ. ಅದರ ಹೆಸರು ಕ್ರಿಸ್ಟಲ್. ಈ ಕಿಸ್ಟಲ್ ಕಾರಣಕ್ಕಾಗಿಯೇ ಹರಿಪ್ರಿಯಾ ಪ್ರೇಮಿಸೋಕೆ ಶುರು ಮಾಡಿದರಂತೆ.