‘ಲವ್ ಆಜ್ ಕಲ್’ ಖ್ಯಾತಿಯ ಆರುಷಿ ಶರ್ಮಾ (Arushi Sharma) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ವೈಭವ್ ವಿಶಾಂತ್ (Vaibhav Vishant) ಜೊತೆ ಆರುಷಿ ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.

View this post on Instagram
ಆರುಷಿ ನಟಿಸಿರುವ ‘ಕಾಲಾ ಪಾನಿ’ ಎಂಬ ಪ್ರಾಜೆಕ್ಟ್‌ನಲ್ಲಿ ವೈಭವ್ ವಿಶಾಂತ್ ಕೆಲಸ ಮಾಡಿದ್ದರು. ಈ ಪರಿಚಯವೇ ಇಂದು ಮದುವೆ ಹಂತಕ್ಕೆ ಬಂದಿದೆ. ಮದುವೆಯಾಗಿ ಈ ಜೋಡಿ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಮಗನ ಜೊತೆ ಗಿಡ ನೆಟ್ಟು ವಿಶೇಷ ಸಂದೇಶ ನೀಡಿದ ಯಶ್ ದಂಪತಿ
ಸಾರಾ ಅಲಿ ಖಾನ್, ಕಾರ್ತಿಕ್ ಆರ್ಯನ್ ನಟಿಸಿದ್ದ ‘ಲವ್ ಆಜ್ ಕಲ್’ (Love Aaj Kal) ಸಿನಿಮಾದಲ್ಲಿ ಆರುಷಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತಮಾಷಾ, ಜಾದುಗಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

