ತಿರುವನಂತಪುರಂ: ಕೇರಳದಲ್ಲಿ (Kerala) ಮೊದಲ ಬಾರಿಗೆ ಕಮಲ ಅರಳಿದೆ. ತ್ರಿಶ್ಯೂರ್‌ನಲ್ಲಿ (Thrissur) ಸುರೇಶ್ ಗೋಪಿ (Suresh Gopi) ಜಯಗಳಿಸಿದ್ದಾರೆ.
74 ಸಾವಿರ ಮತಗಳ ಅಂತರದಿಂದ ಸುರೇಶ್ ಗೋಪಿ ಜಯಗಳಿಸಿದ್ದಾರೆ. ಸುರೇಶ್ ಗೋಪಿ 4,09,302 ಮತಗಳನ್ನು ಪಡೆದರೆ ಸಮೀಪದ ಪ್ರತಿ ಸ್ಪರ್ಧಿ ಸಿಪಿಐ ವಿಎಸ್ ಸುನಿಲ್ ಕುಮಾರ್ 3,34,462 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ (Congress) ಕೆ ಮುರಳೀಧರನ್ 3,22,102 ಮತಗಳನ್ನು ಗಳಿಸಿದ್ದಾರೆ.
Advertisement
2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪನ್ ಜಯಗಳಿಸಿದ್ದರು. ಸುರೇಶ್ ಗೋಪಿ 2,93,822 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.
Advertisement
ಕೇರಳದಲ್ಲಿ ಬಿಜೆಪಿ ಗೆಲ್ಲಿಸಲೇಬೇಕೆಂದು ಸುರೇಶ್ ಗೋಪಿ ಅವರಿಗೆ ಬಿಜೆಪಿ ರಾಜ್ಯಸಭಾ ಸ್ಥಾನಮಾನ ನೀಡಿತ್ತು. 2016 ರಿಂದ 2022ವರೆಗೆ ಸುರೇಶ್ ಗೋಪಿ ರಾಜ್ಯಸಭಾ ಸದಸ್ಯರಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದರು.