ರಾಜ್ಯದಲ್ಲಿ ಪಠ್ಯಪುಸ್ತಕ ಸಂಘರ್ಷ ಕೊನೆ ಮೊದಲಿಲ್ಲದೇ ನಡೆಯುತ್ತಿರುವಾಗಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ನೀಡಿದ ಹೇಳಿಕೆಯೊಂದು ಗಮನ ಸೆಳೆದಿದೆ. ಪೃಥ್ವಿರಾಜ್ ಸಿನಿಮಾ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಅವರು, ದುರಾದೃಷ್ಟವಶಾತ್ ನಮ್ಮ ಚರಿತ್ರೆಯ ಪುಸ್ತಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರಂತಹ ರಾಜರ ಬಗ್ಗೆ ಕೇವಲ 2-3 ಸಾಲುಗಳಷ್ಟೇ ಇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸದ ಪಠ್ಯಪುಸ್ತಕಗಳಲ್ಲಿ ಭಾರತೀಯ ರಾಜರ ಬಗ್ಗೆ ಜಾಸ್ತಿ ಉಲ್ಲೇಖವನ್ನು ಕಾಣುವುದಿಲ್ಲ. ದುರದೃಷ್ಟವಶಾತ್, ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಬಗ್ಗೆ ಕೇವಲ ಎರಡು-ಮೂರು ಸಾಲುಗಳಿವೆ. ಆದರೆ ಆಕ್ರಮಣಕಾರರು, ಮೊಘಲರ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ ಎಂದರು.
Advertisement
Advertisement
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎರಡರ ಮಧ್ಯೆ ಬ್ಯಾಲೆನ್ಸ್ ಇರುವಂತೆ ಇತಿಹಾಸ ಪಠ್ಯಗಳನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಮೊಘಲರ ಆಡಳಿತದ ಬಗ್ಗೆ ತಿಳಿದುಕೊಳ್ಳುವುದು ನಮಗೆ ಮುಖ್ಯ. ಅದೇ ಸಂದರ್ಭದಲ್ಲಿ ನಮ್ಮ ರಾಜರ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು
Advertisement
ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಫಿಸಿದ್ದು, ಭಾರತೀಯ ಚಲನಚಿತ್ರೋದ್ಯಮವು ಜಾಗತಿಕವಾಗಿ ತೆರೆದುಕೊಳ್ಳಲು ಮೋದಿ ಅವರಿಂದ ಸಾಧ್ಯವಾಯಿತು ಎಂದು ಧನ್ಯವಾದ ಹೇಳಿದರು.
ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ ‘ಪೃಥ್ವಿರಾಜ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರತಂಡ ಪ್ರಚಾರವನ್ನು ಬರದಿಂದ ಮಾಡುತ್ತಿದೆ.