ಮಡಿಕೇರಿ: ನಾನು ಇದಕ್ಕಿಂತಲೂ ಕಠಿಣ ಟ್ರಕ್ಕಿಂಗ್‌ನಲ್ಲಿ ಭಾಗಿಯಾಗಿದ್ದೆ. ಈ ಬಾರಿ ದಾರಿ ತಪ್ಪಿ ಕಾಡಿನಲ್ಲಿ ಸಿಲುಕಿದ್ದೆ ಎಂದು ಕೇರಳದ ಮಹಿಳೆ ಶರಣ್ಯ (35) ಹೇಳಿದ್ದಾರೆ. ಅವರು ತಡಿಯಂಡಮೋಳ್ ಬೆಟ್ಟದಲ್ಲಿ (Tadiyandamol Hills) ಗುರುವಾರ (ಏ.2) ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದರು. ಭಾನುವಾರ (ಏ.5) ಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಬಳಿಕ ಅವರು ಮಾತನಾಡಿದರು. ಈ ವೇಳೆ, ನನ್ನ ಬಳಿ 500 ಎಂ.ಎಲ್ ನೀರು ಮಾತ್ರ ಇತ್ತು. ಇಂದು ಎತ್ತರ ಪ್ರದೇಶದ ಕಡೆ ಹೊರಟಿದ್ದೆ. ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಗೆಳೆಯರ ಸಂಪರ್ಕ ಯತ್ನ ವಿಫಲವಾಯಿತು ಎಂದಿದ್ದಾರೆ. ಬಳಿಕ ರಕ್ಷಣಾ ತಂಡದವರ ಫೋನ್‌ನಲ್ಲಿ ಅಮ್ಮನ ಜೊತೆ ಮಾತನಾಡಿದರು. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಮಹಿಳೆ ಮೂರು ದಿನಗಳ ಬಳಿಕ ಪತ್ತೆ
ಸ್ಥಳೀಯ ಕುಡಿಯ ಜನಾಂಗದವರು ಹುಡುಕಾಟ ನಡೆಸುವಾಗ ಕಾಡಿನೊಳಗೆ ಮಹಿಳೆ ಪತ್ತೆಯಾಗಿದ್ದು, ಅವರನ್ನು ಕಾಡಿನಿಂದ ಕರೆದುಕೊಂಡು ಬರಲಾಗಿದೆ. ಇವರ ಪತ್ತೆಗಾಗಿ ಅರಣ್ಯ, ಪೊಲೀಸ್, ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯರು ಸೇರಿದಂತೆ ಒಟ್ಟು 9 ತಂಡಗಳನ್ನು ನಿಯೋಜಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ, ಶ್ವಾನದಳವನ್ನೂ ಬಳಸಲಾಗಿತ್ತು.
ಕೇರಳದಿಂದ ಒಬ್ಬರೇ ಬಂದಿದ್ದ ಅವರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಚಾರಣಕ್ಕಾಗಿ ಹೊರಟಿದ್ದರು. ತಾವು ತಂಗಿದ್ದ ಹೋಂ ಸ್ಟೇಯವರನ್ನು ಗುರುವಾರ ಮಧ್ಯಾಹ್ನ ಸಂಪರ್ಕಿಸಿ, ದಾರಿ ತಪ್ಪಿರುವುದಾಗಿ ಹೇಳಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇನ್ನೂ ಈ ಮಹಿಳೆ ಕಾಣೆಯಾದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, SDRF ತಂಡ ಸೇರಿದಂತೆ ಹಲವಾರು ಜನರು ಹುಡುಕಾಟದ ಕಾರ್ಯಾಚರಣೆಯ ಫಲವಾಗಿ ಅವರು ಸಿಕ್ಕಿದ್ದಾರೆ. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ಮಿಸ್ಸಿಂಗ್ – 4ನೇ ದಿನವೂ ಮುಂದುವರಿದ ಶೋಧ

