ಕಳೆದುಕೊಂಡ ಮೊಬೈಲ್, ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸೆಕ್ಯೂರಿಟಿ ಗಾರ್ಡ್!

Public TV
1 Min Read
VIJ HONEST 01

ವಿಜಯಪುರ: ಕುಡುಕನೋರ್ವ ಕುಡಿದ ಮತ್ತಿನಲ್ಲಿ ಕಳೆದುಕೊಂಡಿದ್ದ ಮೊಬೈಲ್ ಹಾಗೂ ಹಣವನ್ನು ಹಿಂದಿರುಗಿಸುವ ಮೂಲಕ ಸೆಕ್ಯೂರಿಟಿ ಗಾರ್ಡ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಜಿಲ್ಲೆಯ ಸಿಂದಗಿ ಬಸ್ ನಿಲ್ದಾಣದಲ್ಲಿ ಕುಡಿದ ನಶೆಯಲ್ಲಿ ರಮೇಶ್ ನಾಯಕ್ ಎಂಬವರು ತಮ್ಮ ಹಣ ಹಾಗೂ ಮೊಬೈಲ್ ಕಳೆದುಕೊಂಡಿದ್ದರು. ಸಿಂಧಗಿ ಬಸ್ ನಿಲ್ದಾಣದ ಪಾರ್ಕಿಂಗ್ ಬಾಯ್ ಆಗಿ ಕೆಲಸ ಮಾಡುತ್ತಿರುವ ಮೆಹಬೂಬ್ ಅವರು, ಈ ನಗದು ಹಾಗೂ ಮೊಬೈಲ್ ನ್ನು ರಮೇಶ್ ಗೆ ಹಿಂದಿರುಗಿಸಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ನಿವಾಸಿಯಾಗಿರುವ ರಮೇಶ್ 21,500 ರೂಪಾಯಿ ಹಣ ಮತ್ತು 2 ಮೊಬೈಲ್ ಗಳನ್ನು ಬಸ್ ನಿಲ್ದಾಣದಲ್ಲೇ ಬಿಟ್ಟುಹೋಗಿದ್ದರು. ಅದನ್ನ ಮೆಹಬೂಬ್ ಅವರು ಇಂದು ಪೊಲೀಸರ ಸಮ್ಮುಖದಲ್ಲಿ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಮೆಹಬೂಬ್ ರ ಈ ಪ್ರಾಮಾಣಿಕತೆಗೆ ರಮೇಶ್ ಹಾಗೂ ಸಾರ್ವಜನಿಕರು ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article