– ಬರೋಬ್ಬರಿ 35 ಕೆ.ಜಿ ತೂಕ ಕಳೆದುಕೊಂಡ ಜೈನ್
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿಂತೆ ತಿಹಾರ್ ಜೈಲಿ (Tihar Jail) ನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್ (Satyendra Jain) ಅವರನ್ನು ಇಂದು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು (ಸೋಮವಾರ) ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜೈಲಿಗೊಳಗಾದ ಬಳಿಕ ಸತ್ಯೇಂದ್ರ ಜೈನ್ ಅವರು ಸುಮಾರು 35 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈ ಮೂಲಕ ತೀವ್ರ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
Advertisement
Advertisement
ಜೈಲಿನಲ್ಲಿ ನನಗೆ ಒಂಟಿತನ ಕಾಡುತ್ತಿದೆ. ಹೀಗಾಗಿ ತಾನು ಖಿನ್ನತೆಗೊಳಗಾಗಿರುವುದಾಗಿ ಇತ್ತೀಚೆಗಷ್ಟೇ ಸತ್ಯೇಂದ್ರ ಜೈನ್ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲಿರುವ ಮನೋವೈದ್ಯರನ್ನು ಕೂಡ ಭೇಟಿಯಾಗಿದ್ದರು. ಇದನ್ನೂ ಓದಿ: ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ
Advertisement
ಸತ್ಯೇಂದ್ರ ಜೈನ್ ಇರುವ ಸೆಲ್‍ಗೆ ಇಬ್ಬರು ಕೈದಿಗಳನ್ನು ವರ್ಗಾಯಿಸಿದ್ದಕ್ಕಾಗಿ ತಿಹಾರ್ ಜೈಲಿನ ಆಡಳಿತ ಮಂಡಳಿ ಸೂಪರಿಂಟೆಂಡೆಂಟ್‍ಗೆ ಶೋಕಾಸ್ ನೋಟಿಸ್ ನೀಡಿತ್ತು. ಜೈನ್ ಜೈಲು ಸಂಖ್ಯೆ 7 ರ ಅಧೀಕ್ಷಕರಿಗೆ ಪತ್ರ ಬರೆದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೇ 30ರಂದು ಬಂಧಿತರಾಗಿರುವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಸೌಕರ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.