– ಕಾಡ್ಗಿಚ್ಚು ಮಧ್ಯೆ ಲೂಟಿಕೋರರ ಹಾವಳಿ, 20 ಮಂದಿ ಬಂಧನ
ವಾಷಿಂಗ್ಟನ್: ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್‌ನಲ್ಲಿ ಕಾಡಿಚ್ಚು (Los Angeles Wildfires) ತನ್ನ ಬೆಂಕಿ ಕೆನ್ನಾಲಿಗೆಯನ್ನು ಚಾಚುತ್ತಲೇ ಇದೆ. ಅಮೆರಿಕದ 2ನೇ ಅತಿದೊಡ್ಡ ನಗರವಾದ ಕ್ಯಾಲಿಫೋರ್ನಿಯಾ (California) ಬಹುತೇಕ ಹೊತ್ತಿ ಉರಿಯುತ್ತಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
Advertisement
ಈಗಾಗಲೇ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದ ನೆರಹೊರೆಯನ್ನು ಆವರಿಸಿದ್ದು, 19,000 ಎಕರೆ ಪ್ರದೇಶ ಸುಟ್ಟು ಭಸ್ಮವಾಗಿದೆ. ಮತ್ತೊಂದೆಡೆ ಅಲ್ಟಾಡೆನಾದಲ್ಲಿ 13,000 ಎಕರೆ ಪ್ರದೇಶ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಕಿ ನಿಯಂತ್ರಿಸಲು ಅಮೆರಿಕ ಕ್ಯಾಲಿಫೋರ್ನಿಯಾದ ನ್ಯಾಷನಲ್ ಗಾರ್ಡ್ ತಂಡವನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.
Advertisement
ಲಾಸ್ ಏಂಜಲೀಸ್ ನಗರಾದ್ಯಂತ ರಾಷ್ಟ್ರೀಯ ಪ್ರಶಸ್ತಿ, ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟರ ಮನೆಗಳು ಸುಟ್ಟು ಕರಕಲಾಗಿವೆ. ಒಟ್ಟಾರೆ 9,000ಕ್ಕೂ ಹೆಚ್ಚು ಮನೆಗಳು ನಾಶವಾಗಿದ್ದು, 1.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
Advertisement
Advertisement
ಈ ಮಧ್ಯೆ ಸಂದರ್ಭ ಬಳಸಿಕೊಂಡ ಕೆಲವರು ಲೂಟಿ ಮಾಡಲು ಪ್ರಾರಂಭಿಸಿದ್ದು, ಈ ಸಂಬಂಧ 20 ಜನರನ್ನು ಬಂಧಿಸಲಾಗಿದೆ.