ಬೆಂಗಳೂರು: ಸಿಲಿಕಾನ್ ಸಿಟಿಯ ಅಂಡರ್ ಪಾಸ್‍ನಲ್ಲಿ ಲಾರಿ (Lorry Stuck In Underpassa) ಯೊಂದು ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ (Maharani College Underpass) ನಲ್ಲಿ ಲಾರಿ ಸಿಕ್ಕಿಹಾಕಿಕೊಂಡಿದ್ದು, ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಚಾಲುಕ್ಯ ಸರ್ಕಲ್ (Chalukya Circle) ಸಂಪರ್ಕಿಸೋ ರಸ್ತೆ ಅಂಡರ್ ಪಾಸ್ ಬಳಿ ಬಂದ್ ಆಗಿದೆ.
Advertisement
Advertisement
ಲಾರಿಯು ಮೈಸೂರು ಬ್ಯಾಂಕ್ (Mysuru Bank) ಕಡೆಯಿಂದ ಬಂದು ಮುಂದೆ ಚಲಿಸಲಾಗದೆ ಅಂಡರ್‍ಪಾಸ್‍ನಲ್ಲಿ ಸಿಲುಕಿದೆ. ಈ ಲಾರಿ (Lorry) ಯನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಉಪ್ಪಾರಪೇಟೆ ಸಂಚಾರಿ ಪೊಲೀಸರು ಲಾರಿ ತೆಗೆಯಲು ಜೆಸಿಬಿ ತರಿಸಿದ್ದಾರೆ.
Advertisement
ಅಂಡರ್ ಪಾಸ್‍ನಲ್ಲಿ ಲಾರಿ ತೆರಳಲು ಸಾಧ್ಯವಿಲ್ಲ. ಆದರೂ ಚಾಲಕ ಅಂಡರ್‍ಪಾಸ್‍ನಲ್ಲಿ ನುಗ್ಗಿಸಲು ಪ್ರಯತ್ನಿಸಿದ್ದರಿಂದ ಸಿಲುಕಿಕೊಂಡಿದೆ. ಲಾರಿ ಸಿಲುಕಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಚಾಲುಕ್ಯ ಸರ್ಕಲ್ ಬರಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ.
Advertisement