ಬೆಂಗಳೂರು: ಡ್ರೈವರ್ ಅಜಾಗರೂಕತೆಯಿಂದ ಅಂಡರ್ ಪಾಸ್ ಕೆಳಗೆ ಹತ್ತು ಚಕ್ರದ ಲಾರಿಯೊಂದು ಸಿಕ್ಕಿಹಾಕಿಕೊಂಡಿದ್ದ ಘಟನೆ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.
Advertisement
ಬೈಕ್‍ಗಳನ್ನ ಲೋಡ್ ಮಾಡಿಕೊಂಡು ರಾಜಸ್ಥಾನದಿಂದ ಬಂದಿದ್ದ ಲಾರಿ ತಮಿಳುನಾಡಿನ ಹೊಸೂರು ಕಡೆ ಹೊರಟಿತ್ತು. ಈ ವೇಳೆ ಕೆಆರ್ ಸರ್ಕಲ್‍ನ ಅಂಡರ್ ಪಾಸ್ ಕೆಳಗೆ 1ಗಂಟೆ ಕಾಲ ಸಿಕ್ಕಿ ಹಾಕಿಕೊಂಡಿತ್ತು. ಕೊನೆಗೆ ಡ್ರೈವರ್ ಕಷ್ಟಪಟ್ಟು ಲಾರಿಯನ್ನ ಅಂಡರ್ ಪಾಸ್‍ನಿಂದ ಹೊರಕ್ಕೆ ತಂದಿದ್ದಾರೆ.
Advertisement
Advertisement
ಆದ್ರೆ ಇಲ್ಲಿ ಈ ರೀತಿಯ ಘಟನೆ ಆಗಾಗ್ಗೆ ನಡೆಯುತ್ತಿದ್ದು ಇತರೆ ವಾಹನ ಸವಾರರಿಗೆ ತೊಂದರೆ ಆಗ್ತಿದೆ. ಘಟನೆ ರಾತ್ರಿ ನಡೆದಿರುವುದರಿಂದ ಹೆಚ್ಚಿನ ತೊಂದ್ರೆಯಾಗಿಲ್ಲ. ಅಷ್ಟಕ್ಕೂ ಹೆವಿ ವೆಹಿಕಲ್ ಸಿಟಿ ಒಳಗೆ ಪ್ರವೇಶ ಮಾಡುವ ಹಾಗೆಯೇ ಇಲ್ಲ ಅನ್ನೋ ನಿಯಮವಿದೆ. ಅದನ್ನ ಮೀರಿ ಲಾರಿ ಚಾಲಕ ಸಿಟಿ ಲಿಮಿಟ್ಸ್‍ನಲ್ಲಿ ಹೆವಿ ವೆಹಿಕಲ್‍ನ್ನ ತಂದು ಅಂಡರ್ ಪಾಸ್‍ನಲ್ಲಿ ಸಿಲುಕಿ ಹಾಕಿಕೊಂಡಿದ್ರು ಅಂತ ಸ್ಥಳೀಯರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv